Smriti Mandhana: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಆಡಿದ ಮಾತುಗಳೇನು ಗೊತ್ತೇ?

RCB vs DC, WPL 2023: ಮಹಿಳಾ ಪ್ರೀಮಿಯರ್ ಲೀಗ್​ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ, ನಾವು ಎದುರಾಳಿಗೆ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟೆವು. ಸುಮಾರು 20 ರಿಂದ 30 ರನ್​ಗಳನ್ನು ಹೆಚ್ಚು ನೀಡಿದೆವು ಎಂದು ಹೇಳಿದ್ದಾರೆ.

Vinay Bhat
|

Updated on:Mar 06, 2023 | 8:49 AM

ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಭಾನುವಾರ ಮಧ್ಯಾಹ್ನ ನಡೆದ ಡಬ್ಲ್ಯೂಪಿಎಲ್​ 2023 ರ ದ್ವಿತೀಯ ಪಂದ್ಯದಲ್ಲಿ ಆರ್​ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತು.

1 / 9
ಆರ್​ಸಿಬಿ ಪರ ಬೌಲರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬ್ಯಾಟರ್​ಗಳು ಕೂಡ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲಿಲ್ಲ. 200 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಬೌಲರ್​ಗಳು ದುಬಾರಿಯಾದರೆ ಆರ್​ಸಿಬಿ ಮಧ್ಯಮ ಕ್ರಮಾಂಕ ದಿಢೀರ್ ಕುಸಿಯಿತು. ಮಧ್ಯಮ ಓವರ್​ನಲ್ಲಿ 7 ರನ್​ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು.

2 / 9
ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ನಾವು ಎದುರಾಳಿಗೆ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟೆವು. ಸುಮಾರು 20 ರಿಂದ 30 ರನ್​ಗಳನ್ನು ಹೆಚ್ಚು ನೀಡಿದೆವು. ನಾವು ಈರೀತಿಯ ಆರಂಭವನ್ನು ಎದುರು ನೋಡಿರಲಿಲ್ಲ. ಡೆಲ್ಲಿ ಬೌಲರ್​ಗಳು ಮಧ್ಯಮ ಓವರ್​ನಲ್ಲಿ ನಿಧಾನಗತಿಯಲ್ಲಿ ಬೌಲ್ ಎಸೆದರು. ನಾವು ಆ ರೀತಿಯ ಟ್ರಿಕ್ ಉಪಯೋಗಿಸಲು ವಿಫಲರಾದೆವು ಎಂದು ಹೇಳಿದ್ದಾರೆ.

3 / 9
ಮಾತು ಮುಂದುವರೆಸಿದ ಮಂಧಾನ, ನಮ್ಮ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ. ಸೋಮವಾರ ನಮಗೆ ಮತ್ತೊಂದು ಪಂದ್ಯವಿದೆ. ಯೋಚಿಸಿ ಕಮ್​ಬ್ಯಾಕ್ ಮಾಡಲು ಸಮಯವಿದೆ. ಈ ಪಂದ್ಯದಲ್ಲಿ ಟಾರ್ಗೆಟ್ ಬೆನ್ನಟ್ಟುವಾಗ ಉತ್ತಮ ಆರಂಭ ಪಡೆದುಕೊಂಡಿದ್ದೆವು. ಆದರೆ, ಅದೇ ಗತಿಯನ್ನು ಮುಂದುವರೆಸಲು ವಿಫಲರಾದೆವು. ಮುಂದಿನ ಪಂದ್ಯಕ್ಕೆ ಇನ್ನಷ್ಟು ಬಲಿಷ್ಠವಾಗಿ ಬರುತ್ತೇವೆ ಎಂಬುದು ಸ್ಮೃತಿ ಮಾತು.

4 / 9
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಬಂದ ಕೂಡಲೇ ಅಬ್ಬರಿಸಲು ಆರಂಭಿಸಿದರು. ಲ್ಯಾನಿಂಗ್ ಅವರೊಂದಿಗೆ ಬಿರುಗಾಳಿಯ ಶೈಲಿಯಲ್ಲಿ ರನ್ ಗಳಿಸಿದ ಶಫಾಲಿ ಶತಕದ ಜೊತೆಯಾಟವನ್ನು ಹಂಚಿಕೊಂಡರು.

5 / 9
ಇವರಿಬ್ಬರು ಈ ಲೀಗ್​ನ ಇತಿಹಾಸದಲ್ಲಿ ಮೊದಲ ಶತಕದ ಜೊತೆಯಾಟ ಆಡಿದ ದಾಖಲೆ ಕೂಡ ಬರೆದರು. ಇಬ್ಬರೂ ಮೊದಲ ವಿಕೆಟ್‌ಗೆ 162 ರನ್‌ಗಳ ಕಾಣಿಕೆ ನೀಡಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಶಪಾಲಿ,10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 84 ರನ್ ಚಚ್ಚಿದರು.

6 / 9
ಲ್ಯಾನಿಂಗ್ ಕೇವಲ 43 ಎಸೆತಗಳಲ್ಲಿ 14 ಫೋರ್​ನೊಂದಿಗೆ 72 ರನ್ ಸಿಡಿಸಿದರು. ಮರಿಜನ್ನೆ ಕ್ಯಾಪ್ 17 ಎಸೆತಗಳಲ್ಲಿ 3 ಫೋರ್, ಸಿಕ್ಸರ್​ನೊಂದಿಗೆ ಅಜೇಯ 39 ಹಾಗೂ ಜೆಮಿಮಾ ರೋಡ್ರಿಗಸ್ ಅಜೇಯ 22 ರನ್ ಬಾರಿಸಿದರು. ಡೆಲ್ಲಿ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಕಲೆಹಾಕಿತು.

7 / 9
ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ 4 ಓವರ್ ಆಗುವ ಹೊತ್ತಿಗೆ 40 ರನ್ ಬಾರಿಸಿ ಸ್ಫೋಟಕ ಆರಂಭ ಪಡೆದುಕೊಂಡಿತು. ಆದರೆ, ಸೋಫಿ 14 ಹಾಗೂ ನಾಯಕಿ ಮಂಧಾನ 35 ಸಿಡಿಸಿ ಔಟಾದರು. ಎಲ್ಲಿಸ್ ಪೆರ್ರಿ 31 ರನ್​ಗಳ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರು ದಿಢೀರ್ ಕುಸಿತ ಕಂಡಿತು.

8 / 9
ಹೀದರ್ ನೈಟ್ (34) ರನ್​ ಗಳಿಸಿದ್ದರಿಂದ ತಂಡ 150 + ರನ್​ ದಾಖಲಿಸಲು ಶಕ್ತವಾಯಿತು. ಮೇಘನ್ ಸ್ಕಟ್ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತಷ್ಟೆ. ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಪ್ರಥಮ 5 ವಿಕೆಟ್​ ಪಡೆದು ತಾರಾ ನಾರ್ರಿಸ್ ವಿಶೇಷ ದಾಖಲೆ ಮಾಡಿದರು.

9 / 9

Published On - 8:49 am, Mon, 6 March 23

Follow us