PAK vs SL: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆಗಳನ್ನು ಮುರಿದ ಸಾಹಿಬ್ಜಾದಾ ಫರ್ಹಾನ್

Updated on: Feb 28, 2026 | 9:38 PM

Sahabzada Farhan Shatters Records: ಶ್ರೀಲಂಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಎರಡನೇ ಟಿ20 ವಿಶ್ವಕಪ್ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಒಂದು ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ವಿರಾಟ್ ಕೊಹ್ಲಿಯ T20 ವಿಶ್ವಕಪ್ ರನ್ ದಾಖಲೆಯನ್ನೂ ಮುರಿದರು. ಫರ್ಹಾನ್ ಮತ್ತು ಫಖರ್ ಜಮಾನ್ T20 ವಿಶ್ವಕಪ್‌ನ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆಯನ್ನೂ ಸ್ಥಾಪಿಸಿದರು.

1 / 5
ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 213 ರನ್ ಕಲೆಹಾಕಿದೆ. ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಆರಂಭಿಕರ ಪಾತ್ರ ಪ್ರಮುಖವಾಗಿತ್ತು. ಅದರಲ್ಲೂ ಈ ನಿರ್ಣಾಯಕ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್ ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ಮುರಿದರು.

ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 213 ರನ್ ಕಲೆಹಾಕಿದೆ. ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಆರಂಭಿಕರ ಪಾತ್ರ ಪ್ರಮುಖವಾಗಿತ್ತು. ಅದರಲ್ಲೂ ಈ ನಿರ್ಣಾಯಕ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್ ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ಮುರಿದರು.

2 / 5

ಈ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್, ತಮ್ಮ ಇನ್ನಿಂಗ್ಸ್​ನಲ್ಲಿ 60 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್​ ಬಾರಿಸಿದರು. ಈ ಮೂಲಕ ಈ ಟಿ20 ವಿಶ್ವಕಪ್​ನಲ್ಲಿ ಎರಡನೇ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು.

3 / 5

ಈ ಪಂದ್ಯಕ್ಕೂ ಮುನ್ನ ಲೀಗ್ ಹಂತದಲ್ಲಿ ನಮೀಬಿಯಾ ವಿರುದ್ಧವೂ ಸಾಹಿಬ್ಜಾದಾ ಫರ್ಹಾನ್ ಶತಕ ಬಾರಿಸಿದ್ದರು. ಈ ಮೂಲಕ ಒಂದು ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ಸಾಹಿಬ್ಜಾದಾ ಫರ್ಹಾನ್ ಪಾಲಾಗಿದೆ.

4 / 5

ಈ ಶತಕದ ಜೊತೆಗೆ ಇದೇ ಪಂದ್ಯದಲ್ಲಿ 37 ರನ್​ ಪೂರ್ಣಗೊಳಿಸಿದ ಕೂಡಲೇ ಸಾಹಿಬ್ಜಾದಾ ಫರ್ಹಾನ್, ಒಂದು ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು. 12 ವರ್ಷಗಳ ಹಿಂದೆ 2014 ರ ವಿಶ್ವಕಪ್‌ನಲ್ಲಿ ಕೊಹ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 319 ರನ್ ಗಳಿಸಿದ್ದರು. ಈಗ, ಈ ದಾಖಲೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ ಖಾತೆಗೆ ಸೇರಿದೆ.

5 / 5

ಇನ್ನು ಇದೇ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಫರ್ಹಾನ್ ಮತ್ತು ಫಖರ್ ಜಮಾನ್ ಮೊದಲ ವಿಕೆಟ್​ಗೆ 176 ರನ್​ಗಳ ಜೊತೆಯಾಟವನ್ನಾಡಿದರು. ಇದು ಟಿ20 ವಿಶ್ವಕಪ್​ನಲ್ಲಿ ಇದುವರೆಗಿನ ಅತ್ಯಧಿಕ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಕಿವೀಸ್​ನ ಆರಂಭಿಕರಾದ ಟಿಮ್ ಸೈಫರ್ಟ್​ ಹಾಗೂ ಫಿನ್ ಅಲೆನ್ ಮೊದಲ ವಿಕೆಟ್​ಗೆ 175 ರನ್ ಬಾರಿಸಿದ್ದರು.

Loading...
Unable to load recommendations.
Follow Us