468ನೇ ಆಟಗಾರ… ಟೀಮ್ ಇಂಡಿಯಾ ವಿರುದ್ಧ 19ರ ಹರೆಯದ ಸ್ಪೋಟಕ ದಾಂಡಿಗ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Dec 24, 2024 | 10:24 AM

Sam Konstas: ಆಸ್ಟ್ರೇಲಿಯಾ ತಂಡದ 468ನೇ ಟೆಸ್ಟ್ ಆಟಗಾರನಾಗಿ ಸ್ಯಾಮ್​ ಕೊನ್​ಸ್ಟಾಸ್ ಕಣಕ್ಕಿಳಿಯಲಿದ್ದಾರೆ. ಮೆಲ್ಬೋರ್ನ್​ ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಸ್ಯಾಮ್​ ಕೊನ್​ಸ್ಟಾಸ್ ಇನಿಂಗ್ಸ್ ಆರಂಭಿಸಲಿರುವುದನ್ನು ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಖಚಿತಪಡಿಸಿದ್ದಾರೆ.

1 / 5
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೂಲಕ ಸ್ಯಾಮ್ ಕೊನ್​ಸ್ಟಾಸ್ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲಿದ್ದಾರೆ. ಈ ಮೂಲಕ 19ನೇ ವಯಸ್ಸಿನಲ್ಲೇ ಟೆಸ್ಟ್ ಕೆರಿಯರ್ ಆರಂಭಿಸಲು ಸ್ಯಾಮ್ ಸಜ್ಜಾಗಿದ್ದಾರೆ. ಅದು ಕೂಡ ಬಲಿಷ್ಠ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ.

2 / 5
ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳಿಗೆ ಸ್ಯಾಮ್ ಕೊನ್​ಸ್ಟಾಸ್​ ಆಯ್ಕೆಯಾಗಿರಲಿಲ್ಲ. ಆದರೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಆರಂಭಿಕ ಆಟಗಾರ ನಾಥನ್ ಮೆಕ್​ಸ್ವೀನಿ ಅವರನ್ನು ಕೈ ಬಿಡಲಾಗಿದೆ. ಅಲ್ಲದೆ ಅವರ ಬದಲಿಗೆ ಸ್ಯಾಮ್​ ಕೊನ್​ಸ್ಟಾಸ್​ಗೆ ಅವಕಾಶ ನೀಡಲಾಗಿದೆ.

3 / 5
ಅದರಂತೆ ಡಿಸೆಂಬರ್ 26 ರಿಂದ ಮೆಲ್ಬೋರ್ನ್​​ನಲ್ಲಿ ಶುರುವಾಗಲಿರುವ ಭಾರತದ ವಿರುದ್ಧದ ಪಂದ್ಯದ ಮೂಲಕ ಸ್ಯಾಮ್ ಕೊನ್​ಸ್ಟಾಸ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಲಿದ್ದಾರೆ. ಅದು ಕೂಡ ಉಸ್ಮಾನ್ ಖ್ವಾಜಾ ಜೊತೆ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸುವ ಮೂಲಕ ಎಂಬುದು ವಿಶೇಷ.

4 / 5
ಅಂದಹಾಗೆ ಸ್ಯಾಮ್​ ಕೊನ್​ಸ್ಟಾಸ್ ಈಗಾಗಲೇ ಟೀಮ್ ಇಂಡಿಯಾ ವೇಗಿಗಳನ್ನು ಎದುರಿಸಿದ್ದಾರೆ. ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ ಪ್ರೈಮ್ ಮಿನಿಸ್ಟರ್ಸ್​ ಇಲೆವೆನ್​ ಪರ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ 97 ಎಸೆತಗಳನ್ನು ಎದುರಿಸಿದ್ದ ಸ್ಯಾಮ್ 14 ಫೋರ್​ ಹಾಗೂ 1 ಸಿಕ್ಸ್​ನೊಂದಿಗೆ 107 ರನ್ ಚಚ್ಚಿದ್ದರು.

5 / 5
ಹಾಗೆಯೇ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ 11 ಪಂದ್ಯಗಳನ್ನಾಡಿರುವ ಸ್ಯಾಮ್ ಕೊನ್​ಸ್ಟಾಸ್ 2 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 718 ರನ್ ಬಾರಿಸಿದ್ದಾರೆ. ಈ ವೇಳೆ ಯುವ ದಾಂಡಿಗನ ಬ್ಯಾಟ್​ನಿಂದ ಮೂಡಿಬಂದ ಫೋರ್​ಗಳ ಸಂಖ್ಯೆ 74 ಹಾಗೂ ಸಿಕ್ಸ್​ಗಳ ಸಂಖ್ಯೆ 8. ಅಂದರೆ ಬೌಂಡರಿಗಳ ಮೂಲಕವೇ ರನ್​ಗಳಿಸುವುದರಲ್ಲಿ ಸ್ಯಾಮ್ ಕೊನ್​ಸ್ಟಾಸ್ ಎತ್ತಿದ ಕೈ. ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿರುವ ಕಾರಣ ಮೆಲ್ಬೋರ್ನ್​ನಲ್ಲೂ ಯುವ ದಾಂಡಿಗನ ಅಬ್ಬರವನ್ನು ನಿರೀಕ್ಷಿಸಬಹುದು.