Sean Williams: 21 ಫೋರ್​, 5 ಭರ್ಜರಿ ಸಿಕ್ಸ್: ಸಿಡಿಲಬ್ಬರದ ಶತಕ ಸಿಡಿಸಿದ ವಿಲಿಯಮ್ಸ್​

Edited By:

Updated on: Jun 26, 2023 | 6:59 PM

ICC World Cup Qualifiers 2023: ಸೀನ್ ವಿಲಿಯಮ್ಸ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ಝಿಂಬಾಬ್ವೆ ತಂಡವು ಏಕದಿನ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ 408 ರನ್ ಕಲೆಹಾಕಿತು.

1 / 6
ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡವು ಝಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು.

ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡವು ಝಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು.

2 / 6

ಅದರಂತೆ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ ತಂಡಕ್ಕೆ ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಭರ್ಜರಿ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸ್ ಬಿರುಸಿನ ಆಟಕ್ಕೆ ಒತ್ತು ನೀಡಿದರು.

3 / 6

ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದ ವಿಲಿಯಮ್ಸ್ ಯುಎಸ್​ಎ ಬೌಲರ್​ಗಳ ಮೇಲೆ ಬ್ಯಾಟ್ ಪ್ರಹಾರ ನಡೆಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಚೆಂಡು ಸಾಗಿತು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇವಲ 65 ಎಸೆತಗಳಲ್ಲಿ ವಿಲಿಯಮ್ಸ್ ಶತಕ ಪೂರೈಸಿದರು.

4 / 6

ಭರ್ಜರಿ ಸೆಂಚುರಿ ಬೆನ್ನಲ್ಲೇ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದ ವಿಲಿಯಮ್ಸ್ ಆರ್ಭಟಿಸಲಾರಂಭಿಸಿದರು. ಪರಿಣಾಮ ಝಿಂಬಾಬ್ವೆ ನಾಯಕನ ಬ್ಯಾಟ್​ನಿಂದ ಬರೋಬ್ಬರಿ 21 ಫೋರ್​​ಗಳು ಹಾಗೂ 5 ಭರ್ಜರಿ ಸಿಕ್ಸ್​ಗಳು ಮೂಡಿಬಂತು. ಈ ಬೌಂಡರಿಗಳ ನೆರವಿನಿಂದ 101 ಎಸೆತಗಳಲ್ಲಿ 174 ರನ್ ಬಾರಿಸಿ ಸೀನ್ ವಿಲಿಯಮ್ಸ್​ ವಿಕೆಟ್ ಒಪ್ಪಿಸಿದರು.

5 / 6

ಇದರೊಂದಿಗೆ ಝಿಂಬಾಬ್ವೆ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆಗೆ ವಿಲಿಯಮ್ಸ್ ಪಾತ್ರರಾದರು. 2009 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಅಜೇಯ 194 ರನ್​ ಬಾರಿಸಿದ್ದ ಚಾರ್ಲ್ಸ್ ಕೆವಿನ್ ಕೊವೆಂಟ್ರಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೀನ್ಯಾ ವಿರುದ್ಧ ಅಜೇಯ 178 ರನ್​ ಬಾರಿಸಿದ್ದ ಹ್ಯಾಮಿಲ್ಟನ್ ಮಸಕಡ್ಜಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ ಸೀನ್ ವಿಲಿಯಮ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

6 / 6

ಇನ್ನು ಸೀನ್ ವಿಲಿಯಮ್ಸ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ಝಿಂಬಾಬ್ವೆ ತಂಡವು ಏಕದಿನ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ 408 ರನ್ ಕಲೆಹಾಕಿದೆ.

Published On - 6:58 pm, Mon, 26 June 23

Loading...
Unable to load recommendations.
Follow Us