- Kannada News Photo gallery Cricket photos Shreyas Iyer buys luxurious Mercedes SUV priced at INR 2 45 crore
Shreyas Iyer: ಹೊಸ ಮರ್ಸಿಡಿಸ್ ಎಸ್ಯುವಿ ಕಾರು ಖರೀದಿಸಿದ ಶ್ರೇಯಸ್ ಅಯ್ಯರ್; ಬೆಲೆ ಎಷ್ಟು ಕೋಟಿ ಗೊತ್ತಾ?
Shreyas Iyer: ಶ್ರೇಯಸ್ ಅಯ್ಯರ್ ಅವರ ನೆಚ್ಚಿನ ಕಾರು ಫೆರಾರಿಯಾಗಿದ್ದು, ಅವರ ಬಳಿ ಆಡಿ ಎಸ್5, ಬಿಎಂಡಬ್ಲ್ಯು ಮುಂತಾದ ಹಲವು ಕಾರುಗಳಿವೆ.
Updated on:Jun 02, 2022 | 5:46 PM

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಸೊಗಸಾದ ಶೈಲಿಗೆ ಹೆಸರುವಾಸಿಯಾದ ಆಟಗಾರರಲ್ಲಿ ಒಬ್ಬರು. ಐಪಿಎಲ್ 2022 ರ ನಂತರ, ಅಯ್ಯರ್ ಈಗ ತಮ್ಮ ಐಷಾರಾಮಿ ಜೀವನಶೈಲಿಗಾಗಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

ಅಯ್ಯರ್ Mercedes-AMG G634MATIC SUV ಕಾರನ್ನು ಖರೀದಿಸಿದ್ದಾರೆ. ಆದರೂ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಕಾರಿನ ಚಿತ್ರಗಳನ್ನು ಹಂಚಿಕೊಂಡಿಲ್ಲ. ಜರ್ಮನ್ ಕಾರು ತಯಾರಕರ ಪ್ರಮುಖ ಡೀಲರ್‌ಶಿಪ್ ಪಡೆದಿರುವ ಕಂಪನಿಯೊಂದು ಕಾರ್ ಜೊತೆಗೆ ಅಯ್ಯರ್ ಅವರ ಚಿತ್ರಗಳನ್ನು ಹಂಚಿಕೊಂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡಿರುವ ಲ್ಯಾಂಡ್‌ಮಾರ್ಕ್ ಕಾರ್ಸ್ ಮುಂಬೈ, 'ಹೊಚ್ಚ ಹೊಸ Mercedes-Benz G63 ಕಾರ್ ಖರೀದಿಸಿದಕ್ಕಾಗಿ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್‌ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ಈ ಹೊಸ ವಾಹನದ ಬೆಲೆ 2.45 ಕೋಟಿ ರೂ. ಆಗಿದೆ. ಅದರ ವೇಗದ ಬಗ್ಗೆ ಮಾತನಾಡುವುದಾದರೆ, ಈ SUV ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆದುಕೊಳ್ಳುತ್ತದೆ. ಆದರೆ ಶ್ರೇಯಸ್ ಅಯ್ಯರ್ ಅವರ ನೆಚ್ಚಿನ ಕಾರು ಫೆರಾರಿಯಾಗಿದ್ದು, ಅವರ ಬಳಿ ಆಡಿ ಎಸ್5, ಬಿಎಂಡಬ್ಲ್ಯು ಮುಂತಾದ ಹಲವು ಕಾರುಗಳಿವೆ.

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಅಯ್ಯರ್ ಅವರನ್ನು 12 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದಾಗ್ಯೂ, ಅವರು ತಮ್ಮ ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಅಯ್ಯರ್ ಈಗ ದಕ್ಷಿಣ ಆಫ್ರಿಕಾ ವಿರುದ್ಧದ T20I ಸರಣಿಯ ಭಾಗವಾಗಿದ್ದು ಮತ್ತೊಮ್ಮೆ ಅಬ್ಬರಿಸಲು ಉತ್ಸುಕರಾಗಿದ್ದಾರೆ.
Published On - 5:46 pm, Thu, 2 June 22




