AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ವರ್ಷದಲ್ಲಿ ಸಾವಿರ ರನ್; ಹೊಸ ಮೈಲಿಗಲ್ಲು ದಾಟುವ ಸನಿಹದಲ್ಲಿ ಶುಭ್​ಮನ್​ ಗಿಲ್

Shubman Gill: ಕಳೆದೊಂದು ವರ್ಷದಿಂದ ಟೀಂ ಇಂಡಿಯಾದ ಯುವ ಆಟಗಾರ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಹಂತಹಂತವಾಗಿ ಪಕ್ವವಾಗುತ್ತಿದ್ದಾರೆ. ಟೆಸ್ಟ್, ಏಕದಿನ ತಂಡದ ನಾಯಕರಾಗಿ ಹಾಗೂ ಟಿ20 ಉಪನಾಯಕರಾಗಿ ಮಿಂಚುತ್ತಿದ್ದಾರೆ. ಇದಲ್ಲದೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ತಲುಪಲು ಸಿದ್ಧರಾಗಿದ್ದಾರೆ. 2025ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್ ಪ್ರಥಮ ಸ್ಥಾನದಲ್ಲಿದ್ದು, 21 ರನ್ ಗಳಿಸಿದರೆ ಈ ದಾಖಲೆ ನಿರ್ಮಿಸಲಿದ್ದಾರೆ.

ಪೃಥ್ವಿಶಂಕರ
|

Updated on: Nov 10, 2025 | 9:43 PM

Share
ಕಳೆದೊಂದು ವರ್ಷದಿಂದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ಗೆ ಶುಕ್ರದೆಸೆ ಆರಂಭವಾಗಿದೆ. ಕೆಲವೇ ತಿಂಗಳ ಹಿಂದಷ್ಟೇ ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿದ್ದ ಗಿಲ್​ಗೆ ಆ ಬಳಿಕ ಏಕದಿನ ತಂಡದ ನಾಯಕತ್ವವನ್ನೂ ವಹಿಸಲಾಗಿದೆ. ಇದರ ಜೊತೆಗೆ ಟಿ20 ತಂಡದ ಉಪನಾಯಕನಾಗಿರುವ ಗಿಲ್ ಬರುವ ದಿನಗಳಲ್ಲಿ ನಾಯಕನಾಗಿ ಬಡ್ತಿ ಕೂಡ ಪಡೆಯಲಿದ್ದಾರೆ.

1 / 5
ಇನ್ನು ಟೆಸ್ಟ್ ತಂಡದ ನಾಯಕನಾದ ಬಳಿಕ ಶುಭ್​ಮನ್ ಗಿಲ್ ಅವರ ನಾಯಕತ್ವ ಏರಿಳಿತಗಳಿಂದ ಕೂಡಿದೆ. ಆದಾಗ್ಯೂ ಅವರು ಆಟಗಾರನಾಗಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ನಾಯಕನಾಗಿ 2 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿರುವ ಗಿಲ್, ಒಂದು ಸರಣಿಯನ್ನು 2-2 ರಿಂದ ಸಮಬಲಗೊಳಿಸಿದರೆ, ಇನ್ನೊಂದು ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

2 / 5
ನಾಯಕತ್ವದ ಜೊತೆಗೆ ಆಟಗಾರನಾಗಿಯೂ ರನ್​ಗಳ ಶಿಖರ ಕಟ್ಟುತ್ತಿರುವ ಶುಭ್​ಮನ್ ಗಿಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಇದೀಗ ಹೊಸ ಮೈಲಿಗಲ್ಲನ್ನು ನಿರ್ಮಿಸುವ ಹೊಸ್ತಿಲಿನಲಿದ್ದಾರೆ. ವಾಸ್ತವವಾಗಿ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶುಭಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ. ಇದುವರೆಗೆ ಎಂಟು ಟೆಸ್ಟ್ ಪಂದ್ಯಗಳನ್ನಾಡಿರುವ ಗಿಲ್ 979 ರನ್ ಗಳಿಸಿದ್ದಾರೆ.

3 / 5
ನಾಯಕ ಶುಭ್​​​ಮನ್ ಗಿಲ್ ಈ ವರ್ಷ ಐದು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದಾರೆ. ಅವರು 69.92 ಸರಾಸರಿ ಮತ್ತು 63.57 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇದೀಗ ಟೆಸ್ಟ್‌ನಲ್ಲಿ 1000 ರನ್ ಪೂರ್ಣಗೊಳಿಸಲು ಶುಭಮನ್ ಗಿಲ್‌ಗೆ ಕೇವಲ 21 ರನ್‌ಗಳು ಬೇಕಾಗಿವೆ.

4 / 5
ಶುಭ್​ಮನ್ ಗಿಲ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಂದು ವರ್ಷದಲ್ಲಿ 1,000 ಟೆಸ್ಟ್ ರನ್ ಗಳಿಸಲು ಸಜ್ಜಾಗಿದ್ದಾರೆ. 2020 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಗಿಲ್, ಅಂದಿನಿಂದ ಒಂದು ಟೆಸ್ಟ್ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಆಡಿದ್ದಾರೆ. ಈಗ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

5 / 5
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ

ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು

ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ

ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ

ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್

ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ

ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ

ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್