
ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಬಾರಿಸುವ ಮೂಲಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದರು. ಇದರ ಜೊತೆಗೆ ತಂಡಕ್ಕೆ ದಾಖಲೆಯ ಗೆಲುವನ್ನು ತಂದುಕೊಟ್ಟರು. ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ ಸ್ಮೃತಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದರು. ಹೀಗಾಗಿ ಸ್ಮೃತಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು(PC-PTI).
ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದ ಬಗ್ಗೆ ಮಾತನಾಡಿದ ಮಂಧಾನ, ‘ಈ ದಾಖಲೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಮಂಧಾನ ತಮ್ಮ ಸಾಧನೆಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ನನಗೆ ಇದೆಲ್ಲದರ ಬಗ್ಗೆ ತಿಳಿದಿರಲಿಲ್ಲ. ನಿಧಾನಗತಿಯ ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ ಮಾಡುವುದು ನನಗೆ ತುಂಬಾ ಕಷ್ಟ, ಆದರೆ ಎದುರಾಳಿ ತಂಡದ ಬೌಲರ್ಗಳು ಪವರ್‌ಪ್ಲೇನಲ್ಲಿ ಬಹಳ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಿದರು. ಅವರ ಶಿಸ್ತುಬದ್ಧ ಬೌಲಿಂಗ್ ನಾವೆಲ್ಲರೂ ಕಲಿಯಬಹುದಾದ ವಿಷಯವಾಗಿದೆ(PC-PTI).
ಹಾಗೆಯೇ ತಮ್ಮ ಈ ಸ್ಮರಣೀಯ ಶತಕವನ್ನು ಯಾರಿಗೆ ಅರ್ಪಿಸುತ್ತೇನೆ ಎಂಬುದರ ಬಗ್ಗೆ ಮಾತನಾಡಿದ ಮಂಧಾನ,‘ನಾನು ಈ ಶತಕವನ್ನು ಯಾವುದೇ ಒಬ್ಬ ವ್ಯಕ್ತಿಗೆ ಅರ್ಪಿಸುವ ಬಗ್ಗೆ ಯೋಚಿಸಿರಲಿಲ್ಲ, ಆದರೆ ನಾನು ಖಂಡಿತವಾಗಿಯೂ ಅದನ್ನು ನನ್ನ ಕುಟುಂಬಕ್ಕೆ ಅರ್ಪಿಸಲು ಬಯಸುತ್ತೇನೆ ಎಂದರು(PC-PTI).
ಹಾಗೆಯೇ ಎದುರಾಳಿ ತಂಡದ ಬಗ್ಗೆ ಮಾತನಾಡಿದ ಮಂಧಾನ, ‘ನಮಗೆ ಹಾಂಗ್ ಕಾಂಗ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಾವು ಕೆಲವು ವೀಡಿಯೊಗಳನ್ನು ನೋಡಿದ್ದೆವು, ಆದರೆ ನಮಗೆ ಹೆಚ್ಚು ತಿಳಿದಿರಲಿಲ್ಲ. ನಾವು ಅವರ ವಿರುದ್ಧ ಮೊದಲ ಬಾರಿಗೆ ಆಡುತ್ತಿದ್ದೆವು, ಆದ್ದರಿಂದ ನೀವು ಹೆಚ್ಚು ತಿಳಿದಿಲ್ಲದ ಬೌಲರ್ ಅನ್ನು ಎದುರಿಸುವಾಗ, ನೀವು ಮೊದಲು ಆಡಿದ ಕ್ರಿಕೆಟ್ ಅನ್ನು ಮರೆತು ಚೆಂಡನ್ನು ನೋಡುವತ್ತ ಗಮನಹರಿಸಬೇಕು. ಹೀಗಾಗಿ ನಾನು ಅವರ ಎಸೆತಗಳ ವೇಗಕ್ಕೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸಿದೆ(PC-PTI).
ತನ್ನ ಬ್ಯಾಟಿಂಗ್ ತಂತ್ರದ ಬಗ್ಗೆ ಮಾತನಾಡಿದ ಮಂಧಾನ ‘ಕ್ರಿಕೆಟ್‌ನಲ್ಲಿ ಪ್ರತಿದಿನವೂ ಒಂದೇ ಆಗಿರುವುದಿಲ್ಲ. ಹೀಗಾಗಿ ಹಾಂಗ್ ಕಾಂಗ್ ವಿರುದ್ಧ ತನ್ನ ಗಮನವು ಚೆಂಡನ್ನು ನೋಡುವುದು ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಮಾತ್ರ ಇತ್ತು. ಪವರ್‌ಪ್ಲೇನಲ್ಲಿ ಪಿಚ್ ಸ್ವಲ್ಪ ನಿಧಾನವಾಗಿತ್ತು, ಆದರೆ ಅದಕ್ಕೆ ಒಗ್ಗಿಕೊಂಡ ನಂತರ ಬ್ಯಾಟಿಂಗ್ ಸುಲಭವಾಯಿತು. ಅದರ ನಂತರ, ಚೆಂಡಿನ ಲೆಂಗ್ತ್ ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದಿದ್ದಾರೆ(PC-PTI).