- Kannada News Photo gallery Cricket photos Smriti Mandhana’s RCB will face off against UP Warriorz on Friday in WPL 2023 Kannada Cricket News
RCBW vs UPW: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆಯುತ್ತಾ ಆರ್ಸಿಬಿ?: ಮಂಧಾನಗೆ ಇಂದು ಗೆಲ್ಲಲೇ ಬೇಕಾದ ಪಂದ್ಯ
WPL 2023, RCB Women vs UP Warriorz: ಸೋಲುಗಳ ನಡುವೆ ನಾಲ್ಕನೇ ಕದನಕ್ಕೆ ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ ತನ್ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಪಂದ್ಯ ಬೆಂಗಳೂರು ತಂಡಕ್ಕೆ ಮುಖ್ಯವಾಗಿದ್ದು ಗೆಲ್ಲಬೇಕಿದೆ.
Updated on: Mar 10, 2023 | 9:37 AM

ಮಹಿಳಾ ಪ್ರೀಮಿಯರ್ ಲೀಗ್ನ ಚೊಚ್ಚಲ ಆವೃತ್ತಿಯಲ್ಲೇ ಅತ್ಯಂತ ಕೆಟ್ಟ ಆರಂಭ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಹ್ಯಾಟ್ರಿಕ್ ಸೋಲು ಕಂಡು ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ಗಳ ಸೋಲು ಕಂಡರೆ, ದ್ವಿತೀಯ ಪಂದ್ಯದಲ್ಲಿ ಮುಂಬೈ ವಿರುದ್ಧ 9 ವಿಕೆಟ್ಗಳಿಂದ ಮತ್ತು ತೃತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ 11 ರನ್ಗಳಿಂದ ಸೋಲುಂಡಿತು.

ಇದೀಗ ಸೋಲುಗಳ ನಡುವೆ ನಾಲ್ಕನೇ ಕದನಕ್ಕೆ ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ ತನ್ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಪಂದ್ಯ ಬೆಂಗಳೂರು ತಂಡಕ್ಕೆ ಮುಖ್ಯವಾಗಿದ್ದು ಗೆಲ್ಲಬೇಕಿದೆ.

ಆರ್ಸಿಬಿ ಬ್ಯಾಟಿಂಗ್ನಲ್ಲಿ ಅಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಿದ್ದರೂ ಬೌಲಿಂಗ್ನಲ್ಲಿ ಮಾತ್ರ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಯಾವೊಬ್ಬ ಬೌಲರ್ ಮಾರಕವಾಗಿ ಗೋಚರಿಸುತ್ತಿಲ್ಲ. ಎದುರಾಳಿಯ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ.

ಇದೀಗ ಯುಪಿ ವಿರುದ್ಧದ ಪಂದ್ಯದಲ್ಲಿ ಹೊಸ ಗೇಮ್ ಪ್ಲಾನ್ನಿಂದಿಗೆ ಆರ್ಸಿಬಿ ಕಣಕ್ಕಿಳಿಯಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಕೂಡ ಅನಿವಾರ್ಯವಾಗಿದೆ. ರೇಣುಕಾ ಸಿಂಗ್, ಮೆಘನ್ ಸ್ಕಟ್, ಪ್ರೀತಿ ಬೋಸೆ ಅಪಾಯಕಾರಿ ಆಗಿ ಗೋಚರಿಸಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯ ಮುಂಬೈ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸಂಜೆ 7.30 ಕ್ಕೆ ಶುರುವಾಗಲಿದ್ದು, ಟಾಸ್ 7.00 ಗಂಟೆಗೆ ನಡೆಯಲಿದೆ. ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಡಾನ್ ವ್ಯಾನ್ ನೀಕರ್ಕ್, ಕೋಮಲ್ ಜಂಜಾದ್, ಆಶಾ ಶೋಭನಾ, ಎರಿನ್ ಬರ್ನ್ಸ್, ಪ್ರೀತಿ ಬೋಸ್, ರೇಣುಕಾ ಸಿಂಗ್, ಸೋಫಿ ಡಿವೈನ್, ಹೀದರ್ ನೈಟ್, ಮೇಗನ್ ಶುಟ್, ಕನಿಕಾ ಅಹುಜಾ, ದೀಕ್ಷಾ ಕಾಸತ್, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕಾ ಪಾಟೀಲ್.

ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಾರ್ ಬೆಲ್‌ರಿಸ್, ಗ್ರೇಸ್ ಬೆಲ್ಲರಿಸ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.
