ತಂಡದಿಂದ ಉಚ್ಛಾಟನೆ, ಜಾಮೀನು ನಿರಾಕರಣೆ! ಅತ್ಯಾಚಾರ ಆರೋಪ ಹೊತ್ತಿರುವ ಗುಣತಿಲಕಗೆ ಜೀವಾವಧಿ ಶಿಕ್ಷೆ?

| Updated By: ಪೃಥ್ವಿಶಂಕರ

Updated on: Nov 07, 2022 | 12:10 PM

Danushka Gunathilaka: ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

1 / 5
ಐಸಿಸಿ ಟಿ20 ವಿಶ್ವಕಪ್ 2022 ಆಡಲು ಶ್ರೀಲಂಕಾ ಕ್ರಿಕೆಟ್‌ ತಂಡದ ಪರ ಆಸ್ಟ್ರೇಲಿಯಕ್ಕೆ ತೆರಳಿದ್ದ ಸ್ಟಾರ್ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಪೊಲೀಸರು ಬಂಧಿಸಿದ್ದರು.  ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್​ನಲ್ಲಿರುವ ಟೀಮ್ ಹೋಟೆಲ್​ನಿಂದ ಭಾನುವಾರ ಮುಂಜಾನೆ ಗುಣತಿಲಕ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈಗ ಬಂಧನಕ್ಕೊಳಗಾಗಿರುವ ಲಂಕಾ ಕ್ರಿಕೆಟರ್​ ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಭಾರೀ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ.

2 / 5
ಬಂಧನಕ್ಕೊಳಗಾಗಿದ್ದ ಧನುಷ್ಕಾ ಗುಣತಿಲಕ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ವೇಳೆ ಅವರ ಕೈಗೆ ಕೈಕೋಳ ಹಾಕಲಾಗಿತ್ತು. ಅಲ್ಲದೆ ಗುಣತಿಲಕ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಅವರಿಗ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

3 / 5
ಗುಣತಿಲಕ ಈಗ ಜಾಮೀನಿಗಾಗಿ ನ್ಯೂ ಸೌತ್ ವೇಲ್ಸ್​ನ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ. ಗುಣತಿಲಕಗೆ ಒಂದು ವೇಳೆ ಜಾಮೀನು ಸಿಗದಿದ್ದರೆ ಅವರು ದೊಡ್ಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

4 / 5
ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡ ತಂಗಿದ್ದ ಹೋಟೆಲ್‌ನಿಂದ ಮಧ್ಯಾಹ್ನ 3.30 ಕ್ಕೆ ಬಂಧಿಸಲಾಗಿತ್ತು. ಆ ವೇಳೆ ಇಡೀ ಶ್ರೀಲಂಕಾ ತಂಡ ತವರಿಗೆ ಮರಳಲು ಸಿದ್ಧತೆ ನಡೆಸಿತ್ತು. ನವೆಂಬರ್ 2 ರಂದು ಧನುಷ್ಕಾ 29 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅಕ್ಟೋಬರ್ 29 ರಂದು ಗುಣತಿಲಕ ಆ ಹುಡುಗಿಯನ್ನು ಭೇಟಿಯಾಗಿದ್ದರು ಎಂಬುದು ವರದಿಯಾಗಿದೆ.

5 / 5
ಧನುಷ್ಕಾ ಗುಣತಿಲಕ ವಿವಾದ ಮಾಡಿಕೊಂಡಿರುವುದು ಇದೇನು ಮೊದಲಸಲವಲ್ಲ. 2018 ರಲ್ಲಿ ತನ್ನ ಗೆಳೆಯನೊಂದಿಗೆ ನಾರ್ವೇಜಿಯನ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಎಂಬ ಆರೋಪದಲ್ಲಿ ಗುಣತಿಲಕರನ್ನು 6 ಪಂದ್ಯಗಳಿಂದ ಅಮಾನತುಗೊಳಿಸಲಾಗಿತ್ತು. ಇದೀಗ ಧನುಷ್ಕಾ ಅವರ ಇತ್ತೀಚಿನ ವಿವಾದದ ನಂತರ, ಅವರನ್ನು ಶ್ರೀಲಂಕಾ ತಂಡದಿಂದ ಅಮಾನತುಗೊಳಿಸಲಾಗಿದೆ.