AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suryakumar Yadav: ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್

Suryakumar Yadav: ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 8 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿ ಸೂರ್ಯಕುಮಾರ್ ಯಾದವ್ ಮಿಂಚುತ್ತಿದ್ದಾರೆ.

TV9 Web
| Edited By: |

Updated on: Aug 04, 2022 | 12:25 PM

Share
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಈ ಸರಣಿಯಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ ಇಲ್ಲಿಯವರೆಗೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲೂ 3ನೇ ಟಿ20 ಪಂದ್ಯದಲ್ಲಿ 44 ಎಸೆತಗಳಲ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

1 / 6
ಈ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಬಳಿಕ ಸೂರ್ಯಕುಮಾರ್ ಯಾದವ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್​ನಲ್ಲಿ ದುಬಾರಿ ಐಷಾರಾಮಿ ಕಾರಿನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಈ ರೀಲ್‌ನೊಂದಿಗೆ  'ವಿತರಣೆಗೆ ಸಿದ್ಧ' ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಸೂರ್ಯಕುಮಾರ್ ಈ ಐಷಾರಾಮಿ ಕಾರನ್ನು ಬುಕ್ ಮಾಡಿದ್ದು, ಅದರ ಡೆಲಿವರಿ ಶೀಘ್ರದಲ್ಲೇ ಸಿಗಲಿದೆಯಂತೆ.

2 / 6
ಅದರ ವೀಡಿಯೊವನ್ನು ಸೂರ್ಯಕುಮಾರ್ ಅವರು ತಮ್ಮ ಇನ್‌ಸ್ಟಾ ರೀಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಸೂರ್ಯಕುಮಾರ್ ಯಾದವ್ ಖರೀದಿಸಿರುವ ಹೊಸ ಕಾರಿನ ಹೆಸರು ಪೋರ್ಷೆ 911 ಕನ್ವರ್ಟಿಬಲ್.

3 / 6
ಭಾರತದಲ್ಲಿ ಇದರ ಆರಂಭಿಕ ಬೆಲೆ 1 ಕೋಟಿ 69 ಲಕ್ಷ ರೂ. 330 kmph ಟಾಪ್ ಸ್ಪೀಡ್ ಹೊಂದಿರುವ ಈ ಕಾರಿನಲ್ಲಿ ಹಲವು ಅತ್ಯಾಧುನಿಕ ಫೀಚರ್​ಗಳನ್ನು ನೀಡಲಾಗಿದೆ. ಇದೀಗ ಈ ಮಾದರಿಯ ಕಾರನ್ನು ಸೂರ್ಯಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ.

4 / 6
ಅಂದಹಾಗೆ ಸೂರ್ಯಕುಮಾರ್ ಯಾದವ್ ಬಳಿ ಈಗಾಗಲೇ ಬಿಎಂಡಬ್ಲ್ಯು 5 ಸಿರೀಸ್ 530ಡಿ ಸ್ಪೋರ್ಟ್, ರೇಂಜ್ ರೋವರ್ ಇವೊಕ್, ಆಡಿ ಎ6 ನಂತಹ ಐಷಾರಾಮಿ ಕಾರುಗಳಿವೆ. ಇದಲ್ಲದೆ, ಹಾರ್ಲೆ ಡೇವಿಡ್ಸನ್ ಮತ್ತು ಸುಜುಕಿ ಹಯಾಬುಸಾದಂತಹ ಅಲ್ಟ್ರಾ ಐಷಾರಾಮಿ ಬೈಕ್‌ಗಳನ್ನು ಸಹ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಬಳಸುತ್ತಿದ್ದ ಜೊಂಗಾ ವಾಹನವನ್ನೂ ಅವರು ಖರೀದಿಸಿದ್ದರು. ಇದೀಗ ದುಬಾರಿ ಪೋರ್ಷೆ ಕಾರಿನ ಮಾಲೀಕರಾಗಿದ್ದಾರೆ.

5 / 6
ಮಾಧ್ಯಮ ವರದಿಗಳ ಪ್ರಕಾರ ಸೂರ್ಯಕುಮಾರ್ ಯಾದವ್ ಒಂದು ವರ್ಷದಲ್ಲಿ 20 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 8 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿ ಸೂರ್ಯಕುಮಾರ್ ಯಾದವ್ ಮಿಂಚುತ್ತಿದ್ದಾರೆ. ಅಂದಹಾಗೆ ಸೂರ್ಯಕುಮಾರ್ ಯಾದವ್ ತಮ್ಮ 30ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು ಎಂಬುದು ಇಲ್ಲಿ ವಿಶೇಷ.

6 / 6