ಅಂದಹಾಗೆ ಸೂರ್ಯಕುಮಾರ್ ಯಾದವ್ ಬಳಿ ಈಗಾಗಲೇ ಬಿಎಂಡಬ್ಲ್ಯು 5 ಸಿರೀಸ್ 530ಡಿ ಸ್ಪೋರ್ಟ್, ರೇಂಜ್ ರೋವರ್ ಇವೊಕ್, ಆಡಿ ಎ6 ನಂತಹ ಐಷಾರಾಮಿ ಕಾರುಗಳಿವೆ. ಇದಲ್ಲದೆ, ಹಾರ್ಲೆ ಡೇವಿಡ್ಸನ್ ಮತ್ತು ಸುಜುಕಿ ಹಯಾಬುಸಾದಂತಹ ಅಲ್ಟ್ರಾ ಐಷಾರಾಮಿ ಬೈಕ್‌ಗಳನ್ನು ಸಹ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಬಳಸುತ್ತಿದ್ದ ಜೊಂಗಾ ವಾಹನವನ್ನೂ ಅವರು ಖರೀದಿಸಿದ್ದರು. ಇದೀಗ ದುಬಾರಿ ಪೋರ್ಷೆ ಕಾರಿನ ಮಾಲೀಕರಾಗಿದ್ದಾರೆ.