IND vs WI: ಸಿಕ್ಸರ್ಗಳ ಶತಕ ಸಿಡಿಸುವ ಹೊಸ್ತಿಲಿನಲ್ಲಿ ಸೂರ್ಯಕುಮಾರ್ ಯಾದವ್..!
Suryakumar Yadav: ಸೂರ್ಯಕುಮಾರ್ ಯಾದವ್ ಕೇವಲ 3 ಸಿಕ್ಸರ್ ಸಿಡಿಸಿದರೆ, ಟೀಂ ಇಂಡಿಯಾ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಕ್ಲಬ್ ಸೇರಲಿದ್ದಾರೆ.
1 / 11
ಸುಮಾರು ಒಂದು ವರ್ಷದಿಂದ ಟಿ20 ಮಾದರಿಯಲ್ಲಿ ನಂ.1 ಬ್ಯಾಟರ್ ಆಗಿರುವ ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆಯ ಪಟ್ಟಿಗೆ ಸೇರುವ ತವಕದಲ್ಲಿದ್ದಾರೆ.
2 / 11
ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 3 ಸಿಕ್ಸರ್ ಸಿಡಿಸಿದರೆ, ಟೀಂ ಇಂಡಿಯಾ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಕ್ಲಬ್ ಸೇರಲಿದ್ದಾರೆ.
3 / 11
ಮಾರ್ಚ್ 14, 2021 ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಸೂರ್ಯನಿಗೆ ಮಾರ್ಚ್ 18 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಆ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಸಿಕ್ಸರ್ ಸಿಡಿಸುವ ಮೂಲಕ ಸೂರ್ಯ ತಮ್ಮ ಖಾತೆ ತೆರೆದಿದ್ದರು.
4 / 11
ಸದ್ಯ ಟಿ20 ಮಾದರಿಯಲ್ಲಿ 97 ಸಿಕ್ಸರ್ ಸಿಡಿಸಿರುವ ಸೂರ್ಯ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ ಎರಡನೇ ಟಿ20ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸುವಲ್ಲಿ ಸೂರ್ಯ ಯಶಸ್ವಿಯಾದರೆ ನಂ.3 ಸ್ಥಾನಕ್ಕೆ ಬಡ್ತಿ ಪಡೆಯಲ್ಲಿದ್ದು, ರೋಹಿತ್ ಮತ್ತು ವಿರಾಟ್ ನಂತರದ ಸ್ಥಾನ ಪಡೆಯಲ್ಲಿದ್ದಾರೆ.
5 / 11
ಇದುವರೆಗೆ ಆಡಿದ 148 ಟಿ20 ಪಂದ್ಯಗಳಿಂದ ಒಟ್ಟು 182 ಸಿಕ್ಸರ್ ಸಿಡಿಸಿರುವ ರೋಹಿತ್ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಹೊಡೆದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿ ಕುಳಿತಿದ್ದಾರೆ.
6 / 11
ರೋಹಿತ್ ಬಳಿಕ 115 ಪಂದ್ಯಗಳಿಂದ 117 ಸಿಕ್ಸರ್ ಸಿಡಿಸಿರುವ ವಿರಾಟ್, ಭಾರತೀಯ ಬ್ಯಾಟರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಒಟ್ಟಾರೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇನ್ನು ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯನ್ನು ನೋಡುವುದಾದರೆ..
7 / 11
1. ರೋಹಿತ್ ಶರ್ಮಾ 148 ಪಂದ್ಯ, 182 ಸಿಕ್ಸರ್
8 / 11
2. ವಿರಾಟ್ ಕೊಹ್ಲಿ 115 ಪಂದ್ಯ, 117 ಸಿಕ್ಸರ್
9 / 11
3. ಕೆಎಲ್ ರಾಹುಲ್ 72 ಪಂದ್ಯ, 99 ಸಿಕ್ಸರ್
10 / 11
4. ಸೂರ್ಯಕುಮಾರ್ ಯಾದವ್ 49 ಪಂದ್ಯ, 97 ಸಿಕ್ಸರ್
11 / 11
5. ಯುವರಾಜ್ ಸಿಂಗ್ 58 ಪಂದ್ಯ, 74 ಸಿಕ್ಸರ್