ಏಕದಿನ ವಿಶ್ವಕಪ್​ ಸೆಮಿಫೈನಲ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾಥ್

ODI World Cup 2023: ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 05, 2023 | 9:23 PM

ODI World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಲು ಇನ್ನುಳಿದಿರುವುದು ಕೇವಲ 2 ತಿಂಗಳು ಮಾತ್ರ. ಅಕ್ಟೋಬರ್ 5 ರಿಂದ ಕ್ರಿಕೆಟ್​ ಕದನ ಆರಂಭವಾಗಲಿದ್ದು, ಫೈನಲ್ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ.

1 / 7
ಅದಕ್ಕೂ ಮುನ್ನ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಯಾವುದೆಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾಥ್ ಈ ಸಲ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ.

2 / 7
ಈ ಬಾರಿಯ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಅವರು ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಹೀಗಾಗಿ ಟೀಮ್ ಇಂಡಿಯಾವನ್ನು ನಾಲ್ಕರ ಘಟ್ಟದಲ್ಲಿ ಎದುರು ನೋಡಬಹುದು ಎಂದು ಮೆಕ್​ಗ್ರಾಥ್ ತಿಳಿಸಿದ್ದಾರೆ.

3 / 7
ಹಾಗೆಯೇ ಆಸ್ಟ್ರೇಲಿಯಾ ತಂಡವು ಅತ್ಯುತ್ತಮ ಸಮತೋಲನದಿಂದ ಕೂಡಿದೆ. ತಂಡದಲ್ಲಿ ಉತ್ತಮ ಆಲ್​ರೌಂಡರ್​ಗಳಿದ್ದು, ಹೀಗಾಗಿ ಆಸೀಸ್ ಪಡೆ ಕೂಡ ಸೆಮಿಫೈನಲ್ ಪ್ರವೇಶಿಸಲಿದೆ ಎಂದಿದ್ದಾರೆ.

4 / 7
ಅದೇ ರೀತಿ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಇಂಗ್ಲೆಂಡ್ ಅನ್ನು ಕೂಡ ಸೆಮಿ ಫೈನಲ್​ನಲ್ಲಿ ಎದುರು ನೋಡಬಹುದು ಎಂದು ಮೆಕ್​ಗ್ರಾಥ್ ತಿಳಿಸಿದ್ದಾರೆ.

5 / 7
ಇದಲ್ಲದೆ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ್ ಕೂಡ ಸೆಮಿಫೈನಲ್ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ ಎಂದು ಗ್ಲೆನ್ ಮೆಕ್​ಗ್ರಾಥ್ ತಿಳಿಸಿದ್ದಾರೆ.

6 / 7
ಅಂದರೆ ಗ್ಲೆನ್ ಮೆಕ್​ಗ್ರಾಥ್ ಪ್ರಕಾರ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಅದರಂತೆ ಈ ನಾಲ್ಕು ತಂಡಗಳ ನಾಲ್ಕರ ಘಟ್ಟದಲ್ಲಿ ಕಾಣಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

7 / 7
Follow us