- Kannada News Photo gallery Cricket photos T20 Record: Rashid Khan Bowls 100 Deliveries Without Conceding A Boundary
T20 Record: ಬರೋಬ್ಬರಿ 105 ಎಸೆತಗಳು…ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
T20 Cricket Records: ರಶೀದ್ ಖಾನ್ ಇದೀಗ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ಕೂಡ ಅಫ್ಘಾನ್ ಸ್ಪಿನ್ನರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತೀಯ ಪಿಚ್ನಲ್ಲೂ ರಶೀದ್ ಖಾನ್ ಅವರ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.
Updated on: Mar 28, 2023 | 7:23 PM

ಹೊಡಿಬಡಿ ಕ್ರಿಕೆಟ್ ಪಂದ್ಯಾಟ ಎಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಕೊಳ್ಳದೇ ಸತತವಾಗಿ ಎಷ್ಟು ಓವರ್ ಎಸೆಯಬಹುದು? ಒಂದು...ಎರಡು...ಮೂರು...ನಾಲ್ಕು..! ಆದರೆ ಅಫ್ಘಾನಿಸ್ತಾನ್ ಸ್ಪಿನ್ ಮಾಂತ್ರಿ ರಶೀದ್ ಖಾನ್ ಬರೋಬ್ಬರಿ 17 ಓವರ್ಗಳನ್ನು ಎಸೆದಿದ್ದಾರೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರಶೀದ್ ಖಾನ್ ಕಳೆದ 17 ಓವರ್ಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿರಲಿಲ್ಲ. ಅಂದರೆ ಅವರ ಬೌಲಿಂಗ್ನಲ್ಲಿ ಯಾವುದೇ ಬ್ಯಾಟರ್ ಫೋರ್ ಅಥವಾ ಸಿಕ್ಸ್ ಬಾರಿಸಿರಲಿಲ್ಲ. ಇದುವೇ ಈಗ ಹೊಸ ವಿಶ್ವ ದಾಖಲೆಯಾಗಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದೆ 100 ಎಸೆತಗಳನ್ನು ಎಸೆದ ಮೊದಲ ಬೌಲರ್ ಎಂಬ ವಿಶ್ವ ದಾಖಲೆ ರಶೀದ್ ಖಾನ್ ಪಾಲಾಗಿದೆ.

ಅಷ್ಟೇ ಅಲ್ಲದೆ ಒಂದೇ ಒಂದು ಬೌಂಡರಿ ಚಚ್ಚಿಸಿಕೊಳ್ಳದೇ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಓವರ್ ಎಸೆದ ವಿಶ್ವ ದಾಖಲೆ ಕೂಡ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಹೆಸರಿಗೆ ಸೇರ್ಪಡೆಯಾಗಿದೆ.

ಇನ್ನು ರಶೀದ್ ಖಾನ್ ಹೆಸರಿನಲ್ಲಿ ಮುಂದುವರೆದಿದ್ದ ಈ ವಿಶೇಷ ದಾಖಲೆಗೆ ಬ್ರೇಕ್ ಹಾಕಿದ್ದು ಪಾಕಿಸ್ತಾನದ ಬ್ಯಾಟರ್ ಸೈಮ್ ಅಯ್ಯೂಬ್. ಶಾರ್ಜಾದಲ್ಲಿ ನಡೆದ ಪಾಕಿಸ್ತಾನ್-ಅಫ್ಘಾನಿಸ್ತಾನ್ ನಡುವಣ 3ನೇ ಟಿ20 ಪಂದ್ಯದಲ್ಲಿ ಸೈಮ್ ರಶೀದ್ ಖಾನ್ ಎಸೆತದಲ್ಲಿ ಬೌಂಡರಿ ಬಾರಿಸಿದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಸತತ 105 ಎಸೆತಗಳಲ್ಲಿ ಯಾವುದೇ ಬೌಂಡರಿ ನೀಡದೆ ಮಿಂಚಿದ ರಶೀದ್ ಖಾನ್ ಇದೀಗ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ಕೂಡ ಅಫ್ಘಾನ್ ಸ್ಪಿನ್ನರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತೀಯ ಪಿಚ್ನಲ್ಲೂ ರಶೀದ್ ಖಾನ್ ಅವರ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.




