T20 Recrods: ರೋಹಿತ್ ಶರ್ಮಾ ದಾಖಲೆ ಮುರಿದು ಮುನ್ನುಗ್ಗಿದ ಹರ್ಮನ್​ಪ್ರೀತ್ ಕೌರ್

| Updated By: ಝಾಹಿರ್ ಯೂಸುಫ್

Updated on: Feb 19, 2023 | 4:09 PM

Harmanpreet Kaur: ಭಾರತದ ಪರ ಒಟ್ಟು 149 ಪಂದ್ಯಗಳಲ್ಲಿ 134 ಇನಿಂಗ್ಸ್ ಆಡಿರುವ ಹರ್ಮನ್​ಪ್ರೀತ್ ಕೌರ್ 1 ಶತಕ ಹಾಗೂ 9 ಅರ್ಧಶತಕಗೊಂದಿಗೆ 2993 ರನ್ ಕಲೆಹಾಕಿದ್ದಾರೆ.

1 / 5
ಮಹಿಳಾ ಟಿ20 ವಿಶ್ವಕಪ್​​ನ 14ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ.

2 / 5
ಹೌದು, ಟೀಮ್ ಇಂಡಿಯಾ ಪರ ಅತ್ಯಧಿಕ ಟಿ20 ಪಂದ್ಯಗಳನ್ನು ಆಡಿದ ದಾಖಲೆ ಇದೀಗ ಹರ್ಮನ್​ಪ್ರೀತ್ ಕೌರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.

3 / 5
ರೋಹಿತ್ ಶರ್ಮಾ ಇದುವರೆಗೆ ಭಾರತದ ಪರ 148 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 4 ಶತಕ ಹಾಗೂ 29 ಅರ್ಧಶತಕಗೊಂದಿಗೆ ಒಟ್ಟು 3853 ರನ್​ ಕಲೆಹಾಕಿದ್ದಾರೆ.

4 / 5
ಇದೀಗ ಟೀಮ್ ಇಂಡಿಯಾ ಪರ 149 ಟಿ20 ಪಂದ್ಯಗಳನ್ನಾಡಿರುವ ಹರ್ಮನ್​ಪ್ರೀತ್ ಕೌರ್ ಹಿಟ್​ಮ್ಯಾನ್ ಹೆಸರಿನಲ್ಲಿದ್ದ ಅತ್ಯಧಿಕ ಪಂದ್ಯಗಳಲ್ಲಿ ಕಾಣಿಸಿಕೊಂಡ ಭಾರತೀಯ ಎಂಬ ದಾಖಲೆಯನ್ನು ಮುರಿದಿದ್ದಾರೆ.

5 / 5
ಭಾರತದ ಪರ ಒಟ್ಟು 149 ಪಂದ್ಯಗಳಲ್ಲಿ 134 ಇನಿಂಗ್ಸ್ ಆಡಿರುವ ಹರ್ಮನ್​ಪ್ರೀತ್ ಕೌರ್ 1 ಶತಕ ಹಾಗೂ 9 ಅರ್ಧಶತಕಗೊಂದಿಗೆ 2993 ರನ್ ಕಲೆಹಾಕಿದ್ದಾರೆ. ಈ ಮೂಲಕ ಅತ್ಯಧಿಕ ಟಿ20 ಪಂದ್ಯವಾಡಿದ ಟೀಮ್ ಇಂಡಿಯಾ ಪ್ಲೇಯರ್ ಎನಿಸಿಕೊಂಡಿದ್ದಾರೆ.