ಹ್ಯಾಟ್ರಿಕ್ ವಿಕೆಟ್ ಉರುಳಿದರೂ ಆಂಗ್ಲರ ವಿರುದ್ಧ ದಾಖಲೆಯ ಗುರಿ ಬೆನ್ನಟ್ಟಿದ ವಿಂಡೀಸ್

WI vs ENG: ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಪಂದ್ಯಗಳಲ್ಲಿ ಸೋಲುಂಡು ಸರಣಿ ಕಳೆದುಕೊಂಡಿತ್ತು. ಆದರೆ, ನಾಲ್ಕನೇ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ವೈಟ್ ವಾಶ್ ತಪ್ಪಿಸಿಕೊಂಡಿತು. ಇಂಗ್ಲೆಂಡ್ ನೀಡಿದ 219 ರನ್‌ಗಳ ಗುರಿಯನ್ನು ವಿಂಡೀಸ್ 6 ಎಸೆತಗಳು ಬಾಕಿ ಇರುವಾಗಲೇ ಗಳಿಸಿತು. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ ಗೆಲುವಿನ ಖಾತೆ ತೆರೆದುಕೊಂಡಿತು. ಇದರೊಂದಿಗೆ ವಿಂಡೀಸ್ ತನ್ನ ತವರಿನಲ್ಲಿ 7 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.

ಪೃಥ್ವಿಶಂಕರ
|

Updated on: Nov 17, 2024 | 4:05 PM

ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ 4ನೇ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದುಕೊಳ್ಳುವುದರೊಂದಿಗೆ ವೈಟ್ ವಾಶ್ ಮುಜುಗರದಿಂದ ಪಾರಾಗಿದೆ. ಸೇಂಟ್ ಲೂಸಿಯಾದ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 219 ರನ್‌ಗಳ ಸವಾಲ ನೀಡಿತು. ಈ ಗುರಿ ಬೆನ್ನಟ್ಟಿದ ವಿಂಡೀಸ್ 6 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

1 / 7
ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ ಗೆಲುವಿನ ಖಾತೆ ತೆರೆದಿದೆ. ಆದರೆ ಈಗಾಗಲೇ ಸರಣಿ ಗೆದ್ದಿರುವ ಇಂಗ್ಲೆಂಡ್​ಗೆ ಈ ಸೋಲು ಹೆಚ್ಚು ವ್ಯತ್ಯಾಸವನ್ನುಂಟು ಮಾಡದು. ಆದಾಗ್ಯೂ ಈ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 219 ರನ್​ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ವಿಂಡೀಸ್ ತನ್ನ ತವರು ನೆಲದಲ್ಲಿ 7 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

2 / 7
ವಾಸ್ತವವಾಗಿ ವೆಸ್ಟ್ ಇಂಡೀಸ್ 2017 ರಲ್ಲಿ ಭಾರತ ವಿರುದ್ಧ ತವರು ನೆಲದಲ್ಲಿ 194 ರನ್​ಗಳ ಗುರಿಯನ್ನು ಬೆನ್ನಟ್ಟಿತ್ತು. ಇದು ವಿಂಡೀಸ್ ತನ್ನ ತವರಿನಲ್ಲಿ ಬೆನ್ನಟ್ಟಿದ ಅತ್ಯಧಿಕ ಮೊತ್ತವಾಗಿತ್ತು. ಆದರೀಗ, ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗೆ 221 ರನ್ ಗಳಿಸಿ 219 ರನ್‌ಗಳ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ತನ್ನ 7 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

3 / 7
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ತಂಡದ ಪರ ಜೇಕಬ್ ಬೆಥೆಲ್ ಇಂಗ್ಲೆಂಡ್ 62 ರನ್​ಗಳ ಅತ್ಯಧಿಕ ರನ್ ಕೊಡುಗೆ ನೀಡಿದರೆ, ಫಿಲಿಪ್ ಸಾಲ್ಟ್ 35 ಎಸೆತಗಳಲ್ಲಿ 55 ರನ್ ಗಳಿಸಿದರು. ವಿಲ್ ಜಾಕ್ಸ್ 25, ನಾಯಕ ಜೋಸ್ ಬಟ್ಲರ್ 38 ಮತ್ತು ಸ್ಯಾಮ್ ಕರನ್ 24 ರನ್​ಗಳ ಕಾಣಿಕೆ ನೀಡಿದರು.

4 / 7
ಈ ಗುರಿ ಬೆನ್ನಟ್ಟಿದ ವಿಂಡೀಸ್​ಗೆ ಆರಂಭಿಕ ಜೋಡಿ ಎವಿನ್ ಲೂಯಿಸ್ ಮತ್ತು ಶಾಯ್ ಹೋಪ್ ಸ್ಫೋಟಕ ಆರಂಭವನ್ನು ನೀಡಿದರು. ಈ ಜೋಡಿ 136 ರನ್‌ಗಳ ಆರಂಭಿಕ ಜೊತೆಯಾಟವಾಡಿತು. ಆದರೆ ನಂತರ ವಿಂಡೀಸ್ 10ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಸತತ 3 ವಿಕೆಟ್ ಕಳೆದುಕೊಂಡಿತು. ಎವಿನ್ ಲೆವಿಸ್ 68 ಮತ್ತು ಶಾಯ್ ಹೋಪ್ 54 ರನ್ ಗಳಿಸಿ ಔಟಾದರೆ, ನಿಕೋಲಸ್ ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

5 / 7
ಹೀಗಾಗಿ ವಿಂಡೀಸ್ ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 136 ರನ್ ಕಲೆಹಾಕಿದರೆ, ಅದೇ 136 ರನ್​ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ನಾಯಕ ರೋವ್ಮನ್ ಪೊವೆಲ್ 38 ರನ್ ಗಳಿಸಿ ನಿರ್ಣಾಯಕ ಆಟವಾಡಿದರು. ಶಿಮ್ರಾನ್ ಹೆಟ್ಮೆಯರ್ 7 ರನ್ ಗಳಿಸಿ ಔಟಾದ್ದರಿಂದ ವಿಂಡೀಸ್ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.

6 / 7
ಆ ಬಳಿಕ ಶೆರ್ಫಾನ್ ರುದರ್‌ಫೋರ್ಡ್ ಮತ್ತು ರೋಸ್ಟನ್ ಚೇಸ್ ಉತ್ತಮ ಜೊತೆಯಾಟ ವಿಂಡೀಸ್‌ಗೆ ಜಯ ತಂದುಕೊಟ್ಟರು. ಇವರಿಬ್ಬರು ಆರನೇ ವಿಕೆಟ್‌ಗೆ ಮುರಿಯದ 25 ರನ್‌ಗಳ ಜೊತೆಯಾಟ ನೀಡಿದರು. ಶೆರ್ಫೆನ್ 29 ಮತ್ತು ರೋಸ್ಟನ್ 9 ರನ್ ಗಳಿಸಿದರು. ರೆಹಾನ್ ಅಹ್ಮದ್ ಇಂಗ್ಲೆಂಡ್ ಪರ ಅತಿ ಹೆಚ್ಚು 3 ವಿಕೆಟ್ ಪಡೆದರೆ, ಜಾನ್ ಟರ್ನರ್ ಒಂದು ವಿಕೆಟ್ ಪಡೆದರು.

7 / 7
Follow us
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ

ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?

PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC

ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ

ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ

ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ

ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ

ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್

Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ