Team India: ಟೀಮ್ ಇಂಡಿಯಾದಿಂದ 10 ಆಟಗಾರರು ಔಟ್..!
TV9 Web | Updated By: ಝಾಹಿರ್ ಯೂಸುಫ್
Updated on:
Apr 30, 2024 | 11:37 PM
T20 World Cup 2024: ಟಿ20 ವಿಶ್ವಕಪ್ 2024 ಕ್ಕಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಟೂರ್ನಿಗಾಗಿ ಒಟ್ಟು 19 ಆಟಗಾರರನ್ನು ಹೆಸರಿಸಿದ್ದು, ಇವರಲ್ಲಿ ನಾಲ್ವರು ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ಇನ್ನುಳಿದಂತೆ 15 ಆಟಗಾರರು ಮುಖ್ಯ ತಂಡದಲ್ಲಿದ್ದು, ಈ ಆಟಗಾರರೇ ಈ ಬಾರಿಯ ವಿಶ್ವಕಪ್ನಲ್ಲಿ ಭಾರತದ ಪರ ಕಣಕ್ಕಿಳಿಯಲಿದ್ದಾರೆ.
1 / 13
ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಇನ್ನು ವಿಕೆಟ್ ಕೀಪರ್ಗಳಾಗಿ ಈ ಬಾರಿ ಆಯ್ಕೆಯಾಗಿರುವುದು ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್.
2 / 13
ಇನ್ನು ಯುಜ್ವೇಂದ್ರ ಚಹಲ್ 15 ಸದಸ್ಯರ ಬಳಗದಲ್ಲಿ ಸ್ಥಾನ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದರೆ, ಇನ್ನು ಕೆಲ ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂದರೆ 2024 ರಲ್ಲಿ ಭಾರತದ ಪರ ಟಿ20 ಪಂದ್ಯಗಳನ್ನಾಡಿದ್ದರೂ ಟಿ20 ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಲಭಿಸಿಲ್ಲ. ಆ ಆಟಗಾರರು ಯಾರೆಂದರೆ...
3 / 13
1- ಕೆಎಲ್ ರಾಹುಲ್: ಈ ಹಿಂದೆ ಟೀಮ್ ಇಂಡಿಯಾದ ಉಪನಾಯಕನಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ಗೆ ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ.
4 / 13
2- ಶುಭ್ಮನ್ ಗಿಲ್: ಭಾರತ ತಂಡದ ಭರವಸೆಯ ಆರಂಭಿಕನಾಗಿ ಮಿಂಚಿದ್ದ ಶುಭ್ಮನ್ ಗಿಲ್ ಕೂಡ ವಿಶ್ವ ತಂಡದಿಂದ ಹೊರಬಿದ್ದಿದ್ದಾರೆ. ಇದಾಗ್ಯೂ ಅವರನ್ನು ಮೀಸಲು ಆಟಗಾರನ ಪಟ್ಟಿಯಲ್ಲಿರಿಸಲಾಗಿದೆ.
5 / 13
3- ರುತುರಾಜ್ ಗಾಯಕ್ವಾಡ್: ಟೀಮ್ ಇಂಡಿಯಾ ಪರ 19 ಟಿ20 ಪಂದ್ಯಗಳನ್ನಾಡಿರುವ ರುತುರಾಜ್ ಗಾಯಕ್ವಾಡ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಅಜೇಯ 123 ರನ್ ಬಾರಿಸಿ ಮಿಂಚಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ನಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿರುವ ರುತುರಾಜ್ಗೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ.
6 / 13
4- ರಿಂಕು ಸಿಂಗ್: ಟಿ20 ಕ್ರಿಕೆಟ್ನಲ್ಲಿ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿರುವ ಯುವ ಎಡಗೈ ದಾಂಡಿಗ ರಿಂಕು ಸಿಂಗ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
7 / 13
5- ಶ್ರೇಯಸ್ ಅಯ್ಯರ್: ಟೀಮ್ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ಶ್ರೇಯಸ್ ಅಯ್ಯರ್ಗೆ ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.
8 / 13
6- ಇಶಾನ್ ಕಿಶನ್: ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅವರ ಬದಲಿಗೆ ಈ ಬಾರಿ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ.
9 / 13
7- ರವಿ ಬಿಷ್ಣೋಯ್: ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ರವಿ ಬಿಷ್ಣೋಯ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಚಹಲ್ಗೆ ಸ್ಥಾನ ನೀಡಲಾಗಿದೆ.
10 / 13
8- ಮುಖೇಶ್ ಕುಮಾರ್: ಭಾರತ ತಂಡದ ಕೊನೆಯ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಮುಖೇಶ್ ಕುಮಾರ್ ಅವರನ್ನು ಸಹ ಈ ಬಾರಿ ತಂಡದಿಂದ ಹೊರಗಿಡಲಾಗಿದೆ. ಅವರ ಬದಲು ಅರ್ಷದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.
11 / 13
9- ಜಿತೇಶ್ ಶರ್ಮಾ: ಟೀಮ್ ಇಂಡಿಯಾ ಪರ 9 ಟಿ20 ಪಂದ್ಯಗಳನ್ನಾಡಿರುವ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಂದರೆ ಈ ಹಿಂದೆ ಪಂತ್ ಅನುಪಸ್ಥಿತಿಯಲ್ಲಿ ಜಿತೇಶ್ಗೆ ಅವಕಾಶ ಲಭಿಸಿತ್ತು. ಇದೀಗ ರಿಷಭ್ ಪಂತ್ ಆಗಮನದೊಂದಿಗೆ ಜಿತೇಶ್ ಶರ್ಮಾ ಹೊರಬಿದ್ದಿದ್ದಾರೆ.
12 / 13
10- ಮೊಹಮ್ಮದ್ ಶಮಿ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವುದಿಲ್ಲ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.
13 / 13
ಟಿ20 ವಿಶ್ವಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ. ||| ಮೀಸಲು ಆಟಗಾರರು: ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.