AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: 8 ಸಿಕ್ಸರ್, 7 ಬೌಂಡರಿ, 92 ರನ್! ಕಾಂಗರೂಗಳ ಸೊಕ್ಕಡಗಿಸಿದ ರೋಹಿತ್ ಶರ್ಮಾ

IND vs AUS, T20 World Cup 2024: ಆರಂಭದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದ ರೋಹಿತ್ ಶರ್ಮಾ, ಕ್ರೀಸ್​ನಲ್ಲಿರುವವರೆಗೂ ಕಾಂಗರೂ ಬೌಲರ್​ಗಳ ಸೊಕ್ಕಡಗಿಸುವ ಕೆಲಸ ಮಾಡಿದರು. ಅಂತಿಮವಾಗಿ ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 224.38 ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿ ಔಟಾದರು.

ಪೃಥ್ವಿಶಂಕರ
|

Updated on: Jun 24, 2024 | 9:37 PM

Share
ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಇನ್ನಿಂಗ್ಸ್​ಗೆ ಬಲ ತುಂಬಿದ್ದಾರೆ.

1 / 6
ಈ ಪಂದ್ಯದಲ್ಲಿ ಎಂದಿನಂತೆ ವಿರಾಟ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ, ಮೊದಲ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ತಮ್ಮ ಖಾತೆ ತೆರೆದರು. ಇಲ್ಲಿಂದ ರೋಹಿತ್​ರನ್ನು ಕಟ್ಟಿಹಾಕಲು ಯಾವ ಆಸೀಸ್ ವೇಗಿಗೂ ಸಾಧ್ಯಾವಾಗಲಿಲ್ಲ.

2 / 6
ಮಿಚೆಲ್ ಸ್ಟಾರ್ಕ್​ ಎಸೆದ ಮೂರನೇ ಓವರ್​ನಲ್ಲಿ ಬರೋಬ್ಬರಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 28 ರನ್ ಸಿಡಿಸಿದ ರೋಹಿತ್ ಶರ್ಮಾ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇಲ್ಲಿಗೆ ನಿಲ್ಲದ ರೋಹಿತ್ ಕಾಂಗರೂ ಬೌಲರ್​ಗಳ ಬೆವರಿಳಿಸಿದರು.

3 / 6
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಕೇವಲ 10 ಓವರ್​​ಗಳಲ್ಲಿ 100 ರನ್​ಗಳ ಗಡಿ ದಾಟಿಸಿದ ರೋಹಿತ್ ಶತಕದತ್ತ ದಾಪುಗಾಲಿಡುತ್ತಿದ್ದರು. ಅಲ್ಲದೆ ಸೂರ್ಯಕುಮಾರ್ ಜೊತೆಗೆ ಒಳ್ಳೇಯ ಜೊತೆಯಾಟವನ್ನು ಕಟ್ಟುತ್ತಿದ್ದರು. ಆದರೆ ಸ್ಟಾರ್ಕ್ ಓವರ್​ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.

4 / 6
ಮೇಲೆ ಹೇಳಿದಂತೆ ಆರಂಭದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದ ರೋಹಿತ್ ಶರ್ಮಾ, ಕ್ರೀಸ್​ನಲ್ಲಿರುವವರೆಗೂ ಕಾಂಗರೂ ಬೌಲರ್​ಗಳ ಸೊಕ್ಕಡಗಿಸುವ ಕೆಲಸ ಮಾಡಿದರು. ಅಂತಿಮವಾಗಿ ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 224.38 ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿ ಔಟಾದರು.

5 / 6
ಇದಲ್ಲದೆ ಈ ಪಂದ್ಯದಲ್ಲಿ ಬರೋಬ್ಬರಿ 8 ಸಿಕ್ಸರ್ಗಳನ್ನು ಸಿಡಿಸಿದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 200 ಸಿಕ್ಸರ್​ಗಳ ಗಡಿಯನ್ನೂ ದಾಟಿದರು.

6 / 6
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!