T20 World Cup 2024: ವಿಂಡೀಸ್​ನ ಈ 3 ಮೈದಾನಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ?

Updated on: Jun 16, 2024 | 5:33 PM

T20 World Cup 2024: ಸೂಪರ್ 8 ಸುತ್ತಿನಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಹಣಾಹಣಿ ನಿರ್ಧಾರವಾಗಿದ್ದು, ಮೂರನೇ ತಂಡ ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ಆಗಲಿದೆ. ಇಂತಹ ಪರಿಸ್ಥಿತಿಯಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಈ ಮೂರು ಪಂದ್ಯಗಳ ಮೈದಾನಗಳಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ ಎನ್ನುವುದರ ಮೇಲೆ ಎಲ್ಲರ ಕಣ್ಣು.

1 / 8
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಸುತ್ತಿಗೆ ಅಜೇಯ ತಂಡವಾಗಿ ಎಂಟ್ರಿಕೊಟ್ಟಿದೆ. ಲೀಗ್​ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ಇದೀಗ ವಿಂಡೀಸ್ ನಾಡಿನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಸುತ್ತಿಗೆ ಅಜೇಯ ತಂಡವಾಗಿ ಎಂಟ್ರಿಕೊಟ್ಟಿದೆ. ಲೀಗ್​ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ಇದೀಗ ವಿಂಡೀಸ್ ನಾಡಿನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.

2 / 8

ವಾಸ್ತವವಾಗಿ ಟೀಂ ಇಂಡಿಯಾ ಲೀಗ್ ಸುತ್ತಿನ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲಿ ಆಡಿತ್ತು. ಇದೀಗ ಸೂಪರ್ 8 ಸುತ್ತಿನ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲ್ಲಿದ್ದು, ಅದಕ್ಕಾಗಿ ರೋಹಿತ್ ಪಡೆ ವಿಂಡೀಸ್​ಗೆ ಪ್ರಯಾಣ ಬೆಳೆಸಲಿದೆ.

3 / 8

ಅಮೆರಿಕದಲ್ಲಿ ನಡೆದ ಎಲ್ಲ ಪಂದ್ಯಗಳು ಟೀಂ ಇಂಡಿಯಾದ ಹಲವು ಆಟಗಾರರಿಗೆ ಚೊಚ್ಚಲ ಪಂದ್ಯಗಳಾಗಿದ್ದವು. ಅಲ್ಲದೆ ಅಮೆರಿಕ ಪಿಚ್​ಗಳಲ್ಲಿ ಭಾರತದ ಅನುಭವಿ ಆಟಗಾರರಿಗೂ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ವಿಂಡೀಸ್ ಪಿಚ್​ನಲ್ಲಿ ಭಾರತದ ಹಲವು ಆಟಗಾರರು ಪಂದ್ಯಗಳನ್ನಾಡಿದ್ದಾರೆ. ಟೀಂ ಇಂಡಿಯಾ ಕೂಡ ಇಲ್ಲಿ ಹಲವವು ಪಂದ್ಯಗಳನ್ನು ಆಡಿದೆ.

4 / 8

ಸೂಪರ್ 8 ಸುತ್ತಿನಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಹಣಾಹಣಿ ನಿರ್ಧಾರವಾಗಿದ್ದು, ಮೂರನೇ ತಂಡ ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ಆಗಲಿದೆ. ಇಂತಹ ಪರಿಸ್ಥಿತಿಯಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಈ ಮೂರು ಪಂದ್ಯಗಳ ಮೈದಾನಗಳಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ ಎನ್ನುವುದರ ಮೇಲೆ ಎಲ್ಲರ ಕಣ್ಣು.

5 / 8

ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸೂಪರ್ 8 ರಲ್ಲಿ ಜೂನ್ 20 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಬೇಕಾಗಿದೆ. ಈ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲು ಕಂಡಿದೆ.

6 / 8

ಭಾರತ ತಂಡವು 2010 ರಲ್ಲಿ ಈ ಎರಡೂ ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 49 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು ಮತ್ತು ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 14 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.

7 / 8

ಇದರ ನಂತರ, ಭಾರತ ತಂಡವು ಜೂನ್ 22 ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಬೇಕಾಗಿದೆ. ಇಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿದೆ. ಅಂದರೆ ಈ ಹಿಂದೆ ಈ ಮೈದಾನದಲ್ಲಿ ಭಾರತ ಯಾವುದೇ ಪಂದ್ಯವನ್ನಾಡಿಲ್ಲ.

8 / 8

ಭಾರತ ತಂಡವು ತನ್ನ ಮೂರನೇ ಪಂದ್ಯವನ್ನು ಆಸ್ಟ್ರೇಲಿಯಾ ತಂಡದ ವಿರುದ್ಧ ಜೂನ್ 24 ರಂದು ಸೇಂಟ್ ಲೂಸಿಯಾದ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಮೈದಾನದಲ್ಲಿ ಭಾರತ ತಂಡ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದಿದ್ದರೆ ಒಂದರಲ್ಲಿ ಸೋಲು ಕಂಡಿದೆ.

Loading...
Unable to load recommendations.
Follow Us