ನಾಕೌಟ್​ನಲ್ಲಿ ನಾಲ್ಕು ತಂಡಗಳು: ಇಲ್ಲಿದೆ ವೇಳಾಪಟ್ಟಿ

Updated on: Mar 02, 2026 | 8:54 AM

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಸೆಮಿಫೈನಲ್ ಸುತ್ತಿನಲ್ಲಿ ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಎರಡು ಟೀಮ್ ಇಂಡಿಯಾ ಫೈನಲ್ ಆಡಲಿದೆ.

1 / 5
T20 World Cup 2026:  20 ತಂಡಗಳೊಂದಿಗೆ ಶುರುವಾದ ಟಿ20 ವಿಶ್ವಕಪ್​ನಲ್ಲಿ ಈಗ ಉಳಿದಿರುವುದು ಕೇವಲ 4 ತಂಡಗಳು ಮಾತ್ರ. ಇನ್ನುಳಿದ 16 ತಂಡಗಳ ವಿಶ್ವಕಪ್​ ಅಭಿಯಾನ ಅಂತ್ಯವಾಗಿದೆ. ಈ ನಾಲ್ಕು ತಂಡಗಳು ನಾಕೌಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಅಂದರೆ ಸೆಮಿಫೈನಲ್​​​ನಲ್ಲಿ ಕಣಕ್ಕಿಳಿಯಲಿದೆ.

2 / 5
ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5 ರಂದು ನಡೆಯಲಿದ್ದು, ಇಲ್ಲಿ ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಅಂದರೆ ಗ್ರೂಪ್- 1 ರಿಂದ ಸೆಮಿಫೈನಲ್​ಗೇರಿರುವ ತಂಡಗಳು ಗ್ರೂಪ್-2 ನಿಂದ ಅರ್ಹತೆ ಪಡೆದ ತಂಡಗಳ ವಿರುದ್ಧ ಸೆಣಸಲಿದೆ.

3 / 5
ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

4 / 5
ಮಾರ್ಚ್ 5 ರಂದು ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯಗಳಿಸುವ ತಂಡ ಟಿ20 ವಿಶ್ವಕಪ್​ನ ಫೈನಲ್​ಗೇರಲಿದೆ.

5 / 5
ಟಿ20 ವಿಶ್ವಕಪ್​ನ ಫೈನಲ್ ಪಂದ್ಯವು ಮಾರ್ಚ್ 8 ರಂದು, ಭಾನುವಾರ ನಡೆಯಲಿದೆ. ಈ ಮಹಾ ಸಮರಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಭಾರತ/ಸೌತ್ ಆಫ್ರಿಕಾ/ ಇಂಗ್ಲೆಂಡ್/ನ್ಯೂಝಿಲೆಂಡ್ ಈ ನಾಲ್ಕು ತಂಡಗಳಲ್ಲಿ ಒಂದು ಟೀಮ್ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

Follow Us