T20 World Cup: ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ಗಂಭೀರ್ ದಾಖಲೆ ಸರಿಗಟ್ಟಿದ ಅಭಿಷೇಕ್

Updated on: Feb 07, 2026 | 10:19 PM

Abhishek Sharma's T20 World Cup Debut Disaster: ಟೀಂ ಇಂಡಿಯಾ ಪರ ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದರು. ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ ಅವರು, 2007ರ ವಿಶ್ವಕಪ್‌ನಲ್ಲಿ ಗೌತಮ್ ಗಂಭೀರ್ ನಿರ್ಮಿಸಿದ್ದ ಬೇಡದ ದಾಖಲೆಯನ್ನು ಸರಿಗಟ್ಟಿದರು. ಇದು ತಂಡದ ಅಗ್ರ ಕ್ರಮಾಂಕದ ಕುಸಿತಕ್ಕೆ ಕಾರಣವಾಯಿತು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡದ ಅಭಿಷೇಕ್, ತಮ್ಮ ಕಳಪೆ ಪ್ರದರ್ಶನದಿಂದ ನಿರಾಸೆ ಮೂಡಿಸಿದರು.

1 / 6
ಟೀಂ ಇಂಡಿಯಾ ಪರ ಚೊಚ್ಚಲ ಟಿ20 ವಿಶ್ವಕಪ್ ಆಡುತ್ತಿರುವ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾರಿಂದ ಅಭಿಮಾನಿಗಳು ಒಂದೊಳ್ಳೆ ಇನ್ನಿಂಗ್ಸ್​ನ ನಿರೀಕ್ಷೆಯಲ್ಲಿದ್ದರು. ಆದರೆ ಅಭಿಷೇಕ್ ಅವರ ಟಿ20 ವಿಶ್ವಕಪ್ ಪದಾರ್ಪಣೆ ಅತ್ಯಂತ ಕಳಪೆಯಾಗಿತ್ತು. ಅಮೆರಿಕ ವಿರುದ್ಧ ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಭಿಷೇಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.

2 / 6
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಅಭಿಷೇಕ್ ಶರ್ಮಾಗೆ ಎರಡನೇ ಓವರ್​ನಲ್ಲಿ ಸ್ಟ್ರೈಕ್ ಸಿಕ್ಕಿತು. ಅದರಂತೆ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಲು ಯತ್ನಿಸಿದ ಅಭಿಷೇಕ್ ಗೋಲ್ಡನ್ ಡಕ್‌ಗೆ ಔಟಾದರು. ಗೋಲ್ಡನ್ ಡಕ್ ಎಂದರೆ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದರು. ಟಿ20 ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಡಕ್‌ಗೆ ಔಟಾಗುವ ಮೂಲಕ ಅಭಿಷೇಕ್ ಶರ್ಮಾ, ಗೌತಮ್ ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

3 / 6
ಗೌತಮ್ ಗಂಭೀರ್ 2007 ರಲ್ಲಿ ನಡೆದ ಮೊದಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. ಆ ಪಂದ್ಯದಲ್ಲಿ ಗಂಭೀರ್ ಶೂನ್ಯಕ್ಕೆ ಔಟಾಗಿದ್ದರು. ಇದೀಗ 19 ವರ್ಷಗಳ ನಂತರ ಅಭಿಷೇಕ್ ಶರ್ಮಾ ಅದೇ ರೀತಿ ವಿಕೆಟ್ ಒಪ್ಪಿಸಿದ್ದಾರೆ.

4 / 6
ಗೌತಮ್ ಗಂಭೀರ್ ನಂತರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಎರಡನೇ ಭಾರತೀಯ ಆರಂಭಿಕ ಆಟಗಾರ ಎಂಬ ಬೇಡದ ದಾಖಲೆಗೆ ಅಭಿಷೇಕ್ ಕೊರಳೊಡ್ಡಿದ್ದಾರೆ. ಒಂದೇ ವ್ಯತ್ಯಾಸವೆಂದರೆ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್‌ಗೆ ಔಟಾದರೆ, ಗೌತಮ್ ಗಂಭೀರ್ 2007 ರಲ್ಲಿ ಶೂನ್ಯಕ್ಕೆ ಔಟಾಗಿದ್ದರು.

5 / 6
ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ . ಇದಕ್ಕೂ ಮೊದಲು ಅಭಿಷೇಕ್ ಶರ್ಮಾ ಎರಡು ಬಾರಿ ಗೋಲ್ಡನ್ ಡಕ್​ಗೆ ವಿಕೆಟ್ ಒಪ್ಪಿಸಿದ್ದರು. 2026 ರ ಟಿ20 ವಿಶ್ವಕಪ್‌ನಲ್ಲಿ ಗೋಲ್ಡನ್ ಡಕ್ ಆಗುವುದಕ್ಕೂ ಮೊದಲು, ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಬಾರಿ ಗೋಲ್ಡನ್ ಡಕ್​ಗೆ ಔಟಾಗಿದ್ದರು.

6 / 6
ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದ ನಂತರ ಅಮೆರಿಕ ವಿರುದ್ಧದ ಪಂದ್ಯದ ಚಿತ್ರಣವೇ ಬದಲಾಯಿತು. ಭಾರತದ ಅಗ್ರ ಕ್ರಮಾಂಕವು ಕ್ಷಣಾರ್ಧದಲ್ಲಿ ಕುಸಿಯಿತು. ಭಾರತವು ಕೇವಲ 46 ರನ್‌ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಷೇಕ್, ತಿಲಕ್, ಇಶಾನ್, ದುಬೆ, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.