India vs England 2nd Test: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಭಾರತದ ಪರ ಟೆಸ್ಟ್ನಲ್ಲಿ 150 ವಿಕೆಟ್ಗಳನ್ನು ಪಡೆಯಲು ಯಾವ ಬೌಲರ್ ಎಷ್ಟು ಎಸೆತಗಳನ್ನು ಎಸೆದಿದ್ದರು ಎಂದು ನೋಡೋಣ...
1- ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳನ್ನಾಡಿರುವ ಜಸ್ಪ್ರೀತ್ ಬುಮ್ರಾ 6781 ಎಸೆತಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 150 ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
2- ಉಮೇಶ್ ಯಾದವ್: ಭಾರತದ ಪರ 57 ಟೆಸ್ಟ್ ಪಂದ್ಯಗಳನ್ನಾಡಿರುವ ಉಮೇಶ್ ಯಾದವ್ ಒಟ್ಟು 170 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವೇಳೆ 150 ವಿಕೆಟ್ಗಳನ್ನು ಪೂರೈಸಲು ಅವರು 7661 ಎಸೆತಗಳನ್ನು ಎಸೆದಿದ್ದರು.
3- ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ಪರ 64 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಮಿ ಒಟ್ಟು 229 ವಿಕೆಟ್ ಕಬಳಿಸಿದ್ದಾರೆ. ಇದೇ ವೇಳೆ 150 ವಿಕೆಟ್ ಕಬಳಿಸಲು ಮೊಹಮ್ಮದ್ ಶಮಿ 7755 ಎಸೆತಗಳನ್ನು ಎಸೆದಿದ್ದರು.
4- ಕಪಿಲ್ ದೇವ್: ಭಾರತದ ಪರ 227 ಪಂದ್ಯಗಳನ್ನಾಡಿರುವ ಕಪಿಲ್ ದೇವ್ ಒಟ್ಟು 434 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ ಮೊದಲ 150 ವಿಕೆಟ್ಗಳನ್ನು ಪೂರೈಸಲು ಅವರು 8378 ಎಸೆತಗಳನ್ನು ತೆಗೆದುಕೊಂಡಿದ್ದರು.
5- ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾ ಪರ 97 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಶ್ವಿನ್ ಇದುವರೆಗೆ 496 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಮೊದಲ 150 ವಿಕೆಟ್ಗಳನ್ನು ಕಬಳಿಸಲು ಅಶ್ವಿನ್ 8380 ಎಸೆತಗಳನ್ನು ಎಸೆದಿದ್ದರು.
Published On - 10:23 am, Sun, 4 February 24