AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಪಂದ್ಯ ಬಾಕಿ: ವಿಶ್ವಕಪ್​ನಲ್ಲಿ ಸೆಮಿ ಫೈನಲ್​ಗೇರಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

How India can seal a spot in the semi-finals, ICC World Cup 2023: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಾಯಿಂಟ್ ಟೇಬಲ್​ನಲ್ಲಿ 10 ಅಂಕಗಳನ್ನು ಹೊಂದಿರುವ ಹಾಗೂ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಏಕೈಕ ತಂಡ ಟೀಮ್ ಇಂಡಿಯಾವಾಗಿದೆ. ನ್ಯೂಝಿಲೆಂಡ್ ಎಂಟು ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆದರೆ, ಭಾರತ ಇನ್ನೂ ಸೆಮಿ ಫೈನಲ್​ಗೆ ತಲುಪಿಲ್ಲ.

Vinay Bhat
|

Updated on: Oct 23, 2023 | 8:16 AM

Share
ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ನ್ಯೂಝಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ತಮ್ಮ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತ ಈಗ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

1 / 7
ಪಾಯಿಂಟ್ ಟೇಬಲ್​ನಲ್ಲಿ ನ್ಯೂಝಿಲೆಂಡ್ ಎಂಟು ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. 10 ಅಂಕಗಳನ್ನು ಹೊಂದಿರುವ ಹಾಗೂ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಏಕೈಕ ತಂಡ ಟೀಮ್ ಇಂಡಿಯಾವಾಗಿದೆ. ದಕ್ಷಿಣ ಆಫ್ರಿಕಾ ತಂಡ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

2 / 7
ಭಾರತ ತಂಡ 10 ಅಂಕ ಸಂಪಾದಿಸಿದ್ದರೂ ಸೆಮಿ ಫೈನಲ್​ಗೆ ಪ್ರವೇಶ ಪಡೆದಿಲ್ಲ. ಇದೇ ಸ್ವರೂಪದಲ್ಲಿ ನಡೆದ 2019 ರ ವಿಶ್ವಕಪ್ ಆವೃತ್ತಿಯಲ್ಲಿ, ನ್ಯೂಝಿಲೆಂಡ್ ನಾಲ್ಕನೇ ಸ್ಥಾನದಲ್ಲಿ ಐದು ಗೆಲುವುಗಳೊಂದಿಗೆ ಸೆಮೀಸ್​ಗೆ ಅರ್ಹತೆ ಗಳಿಸಿತು. ಆದರೆ, ಒಂದು ಗೇಮ್ ವಾಶ್ ಔಟ್ ಆದ ಕಾರಣ 11 ಅಂಕ ಗಳಿಸಿತ್ತು. ಅಲ್ಲದೆ, ನಿವ್ವಳ ರನ್ ರೇಟ್ (NRR) ಕಾರಣದಿಂದಾಗಿ ಪಾಕಿಸ್ತಾನವು 11 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.

3 / 7
2019 ರ ಆವೃತ್ತಿಯು ಒಟ್ಟು ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಈ ರೀತಿ ಈ ಬಾರಿ ಸಂಭವಿಸುವ ಸಾಧ್ಯತೆಯಿಲ್ಲ. ಹೀಗಾಗಿ ಭಾರತ 10 ಅಂಕ ಪಡೆದುಕೊಂಡರೂ ಸೆಮಿ ಫೈನಲ್​ಗೆ ಪ್ರವೇಶಿಸಿಲ್ಲ. ಆದ್ದರಿಂದ, ಒಂದು ತಂಡವು ಸೆಮಿ ಫೈನಲ್​ಗೆ ಅರ್ಹತೆ ಪಡೆಯಲು ಒಟ್ಟು ಆರು ಗೆಲುವುಗಳ ಅಗತ್ಯವಿದೆ.

4 / 7
ರೋಹಿತ್ ಶರ್ಮಾ ಪಡೆ ಸದ್ಯ ಆಡಿರುವ ಐದು ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಸೆಮಿ ಫೈನಲ್​ಗೇರಲಿದೆ. ಈ ಮೂಲಕ ನಾಕೌಟ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು. ಹಾಗಾದರೆ ಭಾರತಕ್ಕೆ ಇನ್ನು ಎಷ್ಟು ಪಂದ್ಯವಿದೆ?.

5 / 7
ಟೀಮ್ ಇಂಡಿಯಾಕ್ಕಿನ್ನು ನಾಲ್ಕು ಪಂದ್ಯಗಳು ಬಾಕಿಯಿದೆ. ಇದರಲ್ಲಿ ಒಂದು ಗೆದ್ದರೆ ಸೆಮಿ ಫೈನಲ್​ಗೆ ಏರಬಹುದು. ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ, ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ, ನ. 5ಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಕೊನೆಯದಾಗಿ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ.

6 / 7
ನಾಲ್ಕು ಪಂದ್ಯಗಳ ಪೈಕಿ ಒಂದು ಗೆಲುವು ಭಾರತಕ್ಕೆ ಕಷ್ಟವಲ್ಲ. ಹೀಗಾಗಿ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿ ಫೈನಲ್​ನಲ್ಲಿ ತನ್ನ ಜಾಗವನ್ನು ಭದ್ರಪಡಿಸಿಕೊಂಡಿದೆ. ಅತ್ತ ನ್ಯೂಝಿಲೆಂಡ್ ಕೂಡ ಸೆಮಿ ಫೈನಲ್​ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.

7 / 7
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ

RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ