- Kannada News Photo gallery Cricket photos The Australian Test captain got married 10 months after becoming a father
ತಂದೆಯಾದ 10 ತಿಂಗಳ ಬಳಿಕ ವೈವಾಹಿಕ ಬದುಕಿಗೆ ಕಾಲಿರಿಸಿದ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ
Pat Cummins: ಪ್ಯಾಟ್ ಕಮ್ಮಿನ್ಸ್ ಮತ್ತು ಬೆಕಿ ಬೋಸ್ಟನ್ ಜೋಡಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುದ್ದಾದ ಗಂಡು ಮಗು ಜನಿಸಿತ್ತು. ಈಗ 10 ತಿಂಗಳ ನಂತರ ಅವರು ಮದುವೆಯಾಗಿದ್ದಾರೆ.
Updated on: Aug 01, 2022 | 5:13 PM

ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಶುಕ್ರವಾರ ಗೆಳತಿ ಬೆಕಿ ಬಾಸ್ಟನ್ ಜೊತೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಕಮ್ಮಿನ್ಸ್ ನ್ಯೂ ಕ್ವೀನ್ಸ್‌ಲ್ಯಾಂಡ್‌ನ ಬೈರಾನ್ ಕೊಲ್ಲಿಯ ಚಟೌ ಡು ಸೊಲಿಯೆಲ್ ಎಂಬ ರೆಸಾರ್ಟ್ನಲ್ಲಿ ಕಮ್ಮಿನ್ಸ್ ವಿವಾಹ ನೆರವೇರಿತು. ಆಸ್ಟ್ರೇಲಿಯಾದ ಹಲವು ಖ್ಯಾತ ಕ್ರಿಕೆಟಿಗರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಪ್ಯಾಟ್ ಕಮ್ಮಿನ್ಸ್ ಮತ್ತು ಬೆಕಿ ಬೋಸ್ಟನ್ ಜೋಡಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುದ್ದಾದ ಗಂಡು ಮಗು ಜನಿಸಿತ್ತು. ಈಗ 10 ತಿಂಗಳ ನಂತರ ಅವರು ಮದುವೆಯಾಗಿದ್ದಾರೆ. ಕಮ್ಮಿನ್ಸ್ ಮತ್ತು ಬೋಸ್ಟನ್ ಕಳೆದ ವರ್ಷ ಮದುವೆಯಾಗಬೇಕಿತ್ತು. ಆದರೆ ಕೊರೊನಾದಿಂದಾಗಿ ಈ ಮದುವೆಯನ್ನು ಮುಂದೂಡಲಾಗಿತ್ತು.

ಬೆಕಿ ಬೋಸ್ಟನ್ ಮತ್ತು ಪ್ಯಾಟ್ ಕಮ್ಮಿನ್ಸ್ ಕಳೆದ 9 ವರ್ಷಗಳಿಂದ ಅಂದರೆ 2013 ರಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2020 ರಲ್ಲಿ, ಕಮ್ಮಿನ್ಸ್ ಬೆಕಿಯನ್ನು ಮದುವೆಗೆ ಪ್ರಸ್ತಾಪಿಸಿದರು. 2020 ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಪ್ಯಾಟ್ ಕಮ್ಮಿನ್ಸ್ ಕ್ರಿಕೆಟ್ನಲ್ಲಿ ಹೆಸರು ಮಾಡಿದ್ದರೆ, ಬೆಕಿ ಯುಕೆಯ ಬೋಸ್ಟನ್ ನಿವಾಸಿಯಾಗಿದ್ದು, ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಅವರು ಆನ್‌ಲೈನ್ ಸ್ಟೋರ್ ಕೂಡ ಹೊಂದಿದ್ದಾರೆ. ಈ ಇಬ್ಬರ ಮದುವೆಯಲ್ಲಿ ಆಸೀಸ್ ಕ್ರಿಕೆಟಿಗರಾದ ಮಿಚೆಲ್ ಸ್ಟಾರ್ಕ್, ಟಿಮ್ ಪೈನ್, ನಾಥನ್ ಲಿಯಾನ್ ಪಾಲ್ಗೊಂಡರು.

ಕಮ್ಮಿನ್ಸ್ ಅವರ ಸ್ನೇಹಿತ ಮತ್ತು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಜುಲೈ 24 ರಂದು ಎಮ್ಮಾ ಮೆಕಾರ್ಥಿಯನ್ನು ವಿವಾಹವಾಗಿದ್ದರು. ನಾಥನ್ ಲಿಯಾನ್ಗೆ ಇದು ಎರಡನೇ ಮದುವೆ. ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.




