ಮುಂಬೈ ಔಟ್..! ಪ್ಲೇಆಫ್​ಗೇರಿದ ಸನ್‌ರೈಸರ್ಸ್ ಮತ್ತು ಸೂಪರ್‌ಜೈಂಟ್ಸ್

Updated on: Aug 13, 2026 | 6:34 PM

The Hundred 2026 Playoffs: 2026ರ ದಿ ಹಂಡ್ರೆಡ್ ಲೀಗ್ ಪ್ಲೇಆಫ್‌ ಸುತ್ತು ಸಮೀಪಿಸುತ್ತಿದ್ದು, ಅರ್ಹತಾ ತಂಡಗಳ ಪಟ್ಟಿ ಅಂತಿಮಗೊಂಡಿದೆ. ಟ್ರೆಂಟ್ ರಾಕೆಟ್ಸ್ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ. ಎಂಐ ಲಂಡನ್ ತನ್ನ ಅಂತಿಮ ಪಂದ್ಯ ಗೆದ್ದರೂ, ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ. ಸನ್‌ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಎಲಿಮಿನೇಟರ್‌ನಲ್ಲಿ ಸೆಣಸಲಿದ್ದು, ವಿಜೇತರು ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಎದುರಿಸಲಿದ್ದಾರೆ.

1 / 5
 2026 ರ ದಿ ಹಂಡ್ರೆಡ್ ಲೀಗ್​ನಲ್ಲಿ ಪ್ಲೇಆಫ್‌ ಸುತ್ತು ಇನ್ನೇನು ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಈ ಸುತ್ತಿಗೆ ಅರ್ಹತೆ ಪಡೆದ ತಂಡಗಳ ಪಟ್ಟಿ ಅಂತಿಮಗೊಂಡಿದೆ. ಆದರೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಲಂಡನ್ ಪಂದ್ಯಾವಳಿಯಿಂದ ಹೊರಬಿದ್ದಿದೆ.

2026 ರ ದಿ ಹಂಡ್ರೆಡ್ ಲೀಗ್​ನಲ್ಲಿ ಪ್ಲೇಆಫ್‌ ಸುತ್ತು ಇನ್ನೇನು ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಈ ಸುತ್ತಿಗೆ ಅರ್ಹತೆ ಪಡೆದ ತಂಡಗಳ ಪಟ್ಟಿ ಅಂತಿಮಗೊಂಡಿದೆ. ಆದರೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಲಂಡನ್ ಪಂದ್ಯಾವಳಿಯಿಂದ ಹೊರಬಿದ್ದಿದೆ.

2 / 5

ಇತ್ತ ಭಾರತೀಯ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆದಿವು. ಇದಲ್ಲದೆ, ಟ್ರೆಂಟ್ ರಾಕೆಟ್ಸ್ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

3 / 5

ಇತ್ತ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದರೆ, ಮುಂಬೈ ನಾಲ್ಕನೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಯಿತು. ಲೀಗ್ ಹಂತದ ನಂತರ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟ್ರೆಂಟ್ ರಾಕೆಟ್ಸ್ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.

4 / 5

ಉಳಿದಂತೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಎರಡನೇ ಸ್ಥಾನ ಮತ್ತು ಸನ್‌ರೈಸರ್ಸ್ ಲೀಡ್ಸ್ ಮೂರನೇ ಸ್ಥಾನ ಪಡೆದುಕೊಂಡಿವೆ. ಹೀಗಾಗಿ ಈ ಎರಡೂ ತಂಡಗಳು ಆಗಸ್ಟ್ 14 ರಂದು ಎಲಿಮಿನೇಟರ್‌ನಲ್ಲಿ ಆಡಲಿವೆ. ಈ ಪಂದ್ಯದ ವಿಜೇತರು ಆಗಸ್ಟ್ 16 ರಂದು ನಡೆಯಲಿರುವ ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಎದುರಿಸಲಿದ್ದಾರೆ.

5 / 5

ಎಂಐ ಜೊತೆಗೆ, ಸದರ್ನ್ ಬ್ರೇವ್, ವೆಲ್ಷ್ ಫೈರ್, ಲಂಡನ್ ಸ್ಪಿರಿಟ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಕೂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದವು. ಬರ್ಮಿಂಗ್ಹ್ಯಾಮ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತು. ಇತ್ತ ಎಂಐ ಲಂಡನ್ ಪುರುಷ ಹಾಗೂ ಮಹಿಳಾ ತಂಡಗಳೆರಡು ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿವೆ.

Published On - 6:33 pm, Thu, 13 August 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us