Mumbai Indian - Oval Invincibles: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ಕ್ರಿಕೆಟ್ ಲೀಗ್ನತ್ತ ಮುಖ ಮಾಡಿದೆ. ಈಗಾಗಲೇ ಸೌತ್ ಆಫ್ರಿಕಾ, ಯುಎಸ್ಎ, ಯುಎಇ ಟಿ20 ಲೀಗ್ಗಳಲ್ಲಿ ತಂಡಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಇದೀಗ ದಿ ಹಂಡ್ರೆಡ್ ಲೀಗ್ನಲ್ಲೂ ತಂಡವೊಂದನ್ನು ಖರೀದಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ 100 ಎಸೆತಗಳ ಲೀಗ್ಗೆ ಕಾಲಿಟ್ಟಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇದೀಗ ಮತ್ತೊಂದು ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದೆ. ಆದರೆ ಈ ಬಾರಿ ಮುಖ ಮಾಡಿದ್ದು ಟಿ20 ಲೀಗ್ನತ್ತ ಅಲ್ಲ. ಬದಲಾಗಿ ದಿ ಹಂಡ್ರೆಡ್ ಲೀಗ್. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ 100 ಎಸೆತಗಳ ಟೂರ್ನಿ ದಿ ಹಂಡ್ರೆಡ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡವೊಂದನ್ನು ಖರೀದಿಸಿದೆ.
1 / 8
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸಿದ್ದು, ಈ ಮೂಲಕ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದೆ. ಹೀಗಾಗಿ ಮುಂಬರುವ ದಿ ಹಂಡ್ರೆಡ್ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ ತಂಡವು MI ಓವಲ್ ತಂಡವಾಗಿ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.
2 / 8
ಇತ್ತ ಓವಲ್ ಇನ್ವಿನ್ಸಿಬಲ್ ತಂಡದ ಬಹುಪಾಲನ್ನು ಖರೀದಿಸುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ 5ನೇ ತಂಡವನ್ನು ಸೇರಿಸಿಕೊಂಡಂತಾಗಿದೆ. ಅಂದರೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೊರತುಪಡಿಸಿ, ಇನ್ನುಳಿದ ಲೀಗ್ಗಳಲ್ಲಿ 5 ತಂಡಗಳು ಕಣಕ್ಕಿಳಿಯುತ್ತಿವೆ. ಆ ತಂಡಗಳಾವುವು ಎಂದರೆ...
3 / 8
MI ವುಮೆನ್ಸ್: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಹಿಳಾ ತಂಡವನ್ನು ಹೊಂದಿದೆ. 2023 ರಿಂದ ಶುರುವಾಗಿರುವ ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವುಮೆನ್ಸ್ ತಂಡವು ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
4 / 8
MI ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು MI ನ್ಯೂಯಾರ್ಕ್ ಹೆಸರಿನ ತಂಡವನ್ನು ಹೊಂದಿದೆ.
5 / 8
MI ಕೇಪ್ ಟೌನ್: ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕತ್ವದ MI ಕೇಪ್ ಟೌನ್ ತಂಡವು ಕಣಕ್ಕಿಳಿಯುತ್ತಿದೆ.
6 / 8
MI ಎಮಿರೇಟ್ಸ್: ಯುಎಇನಲ್ಲಿ ಆಯೋಜಿಸಲಾಗುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು MI ಎಮಿರೇಟ್ಸ್ ತಂಡವನ್ನು ಹೊಂದಿದೆ.
7 / 8
ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓವಲ್ ಇನ್ವಿನ್ಸಿಬಲ್ ತಂಡದ ಪಾಲನ್ನು ಖರೀದಿಸಿ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿಗೆ ಲಗ್ಗೆಯಿಟ್ಟಿದೆ. ಈ ಮೂಲಕ ರಿಲಯನ್ಸ್ ಮಾಲೀಕತ್ವದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು 6 ತಂಡಗಳನ್ನು ಕಣಕ್ಕಿಳಿಸುತ್ತಿದೆ.