- Kannada News Photo gallery Cricket photos Tim Southee becomes the first New Zealand bowler to get 700 international wickets in all formats
Tim Southee: ನ್ಯೂಜಿಲೆಂಡ್ ಪರ ಯಾರೂ ಮಾಡದ ವಿಶ್ವ ದಾಖಲೆ ಬರೆದ ಟಿಮ್ ಸೌಥಿ..!
Tim Southee: ಟಿಮ್ ಸೌಥಿ ನ್ಯೂಜಿಲೆಂಡ್ ಪರ ಇದುವರೆಗೆ ಒಟ್ಟು 353 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 356, ಏಕದಿನದಲ್ಲಿ 210 ಮತ್ತು ಟಿ20ಯಲ್ಲಿ 134 ವಿಕೆಟ್‌ಗಳನ್ನು ಪಡೆದಿದ್ದಾರೆ.
Updated on:Feb 25, 2023 | 5:51 PM

ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ತಮ್ಮ ವೃತ್ತಿ ಜೀವನದಲ್ಲಿ ಅಪರೂಪದ ಮೈಲಿಗಲ್ಲನ್ನು ತಲುಪಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೌಥಿ ಸೇರಿಕೊಂಡಿದ್ದಾರೆ.

ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ (9) ಅವರನ್ನು ಔಟ್ ಮಾಡುವ ಮೂಲಕ ತಮ್ಮ ವೃತ್ತಿಜೀವನದ 700 ನೇ ವಿಕೆಟ್ ಪಡೆದರು.

ಅಲ್ಲದೆ, ನ್ಯೂಜಿಲೆಂಡ್ ಪರವಾಗಿ 700 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಅಪರೂಪದ ಗೌರವಕ್ಕೆ ಸೌಥಿ ಪಾತ್ರರಾದರು.

ಟಿಮ್ ಸೌಥಿ ನ್ಯೂಜಿಲೆಂಡ್ ಪರ ಇದುವರೆಗೆ ಒಟ್ಟು 353 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 356, ಏಕದಿನದಲ್ಲಿ 210 ಮತ್ತು ಟಿ20ಯಲ್ಲಿ 134 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿಮ್ ಸೌಥಿ ನಂತರ ನ್ಯೂಜಿಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಡೇನಿಯಲ್ ವೆಟ್ಟೋರಿ 2ನೇ ಸ್ಥಾನ ಹಾಗೂ ರಿಚರ್ಡ್ ಹ್ಯಾಡ್ಲಿ 3ನೇ ಸ್ಥಾನದಲ್ಲಿದ್ದಾರೆ
Published On - 5:51 pm, Sat, 25 February 23




