ಇಂದು ಮೆಲ್ಬೋರ್ನ್ ಮೈದಾನದಲ್ಲಿ ಭಾರತ- ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಉಭಯ ತಂಡಗಳು ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 11 ಬಾರಿ ಮುಖಾಮುಖಿಯಾಗಿದ್ದು, ಈ ಇಬ್ಬರ ನಡುವಿನ ಕದನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿ ಕಿಂಗ್ ಕೊಹ್ಲಿಗೆ ಸಂದಿದೆ.
ವಿರಾಟ್ ಕೊಹ್ಲಿ ಇದುವರೆಗೆ ಪಾಕಿಸ್ತಾನ ತಂಡದ ವಿರುದ್ಧ 9 ಪಂದ್ಯಗಳನ್ನಾಡಿದ್ದು, 119.06 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ 67.66ರ ಸರಾಸರಿಯಲ್ಲಿ 406 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ.
ಕೊಹ್ಲಿ ಬಳಿಕ ಈ ಪಟ್ಟಿಯಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ರಿಜ್ವಾನ್ ಹೆಸರಿದ್ದು, ಟೀಂ ಇಂಡಿಯಾ ವಿರುದ್ಧ 3 ಪಂದ್ಯಗಳನ್ನಾಡಿರುವ ರಿಜ್ವಾನ್, 130.40 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 96. 50 ರ ಸರಾಸರಿಯಲ್ಲಿ 193 ರನ್ ಗಳಿಸಿದ್ದಾರೆ.
ಇನ್ನು 3ನೇ ಸ್ಥಾನದಲ್ಲಿ ಪಾಕ್ ತಂಡದ ಹಿರಿಯ ಕ್ರಿಕೆಟಿಗ ಶೋಯೆಭ್ ಮಲಿಕ್ ಇದ್ದು, ಟೀಂ ಇಂಡಿಯಾ ವಿರುದ್ಧ 9 ಪಂದ್ಯಗಳನ್ನಾಡಿರುವ ಮಲಿಕ್, 27.33 ರ ಸರಾಸರಿಯಲ್ಲಿ 164 ರನ್ ಗಳಿಸಿದ್ದಾರೆ.
4ನೇ ಸ್ಥಾನದಲ್ಲೂ ಪಾಕ್ ಆಟಗಾರನ ಹೆಸರಿದ್ದು, ಟೀಂ ಇಂಡಿಯಾ ವಿರುದ್ಧ 8 ಪಂದ್ಯಗಳನ್ನಾಡಿರುವ ಮೊಹಮ್ಮದ್ ಹಫೀಜ್ 26 ರ ಸರಾಸರಿಯಲ್ಲಿ 156 ರನ್ ಗಳಿಸಿದ್ದಾರೆ.
5ನೇ ಸ್ಥಾನದಲ್ಲಿ ಟೀಂ ಇಂಡಿಯಾದ ಯುವರಾಜ್ ಸಿಂಗ್ ಹೆಸರಿದ್ದು, ಪಾಕ್ ವಿರುದ್ಧ 8 ಪಂದ್ಯಗಳನ್ನಾಡಿರುವ ಯುವಿ, 109.92 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 25.83 ರ ಸರಾಸರಿಯಲ್ಲಿ 155 ರನ್ ಗಳಿಸಿದ್ದಾರೆ.
Published On - 10:30 am, Sun, 23 October 22