SMAT 2025: ಬೀದರ್ ಹುಡುಗ ವರುಣ್ ಚಕ್ರವರ್ತಿಗೆ ತಮಿಳುನಾಡು ತಂಡದ ನಾಯಕತ್ವ

Updated on: Nov 14, 2025 | 11:21 AM

Varun Chakravarthy captain: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರ ತಮಿಳುನಾಡು ತಂಡದ ನಾಯಕತ್ವವನ್ನು ಕರ್ನಾಟಕ ಮೂಲದ ಟೀಂ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ನೀಡಲಾಗಿದೆ. ಟಿ20 ಸ್ವರೂಪದಲ್ಲಿ ಪ್ರಮುಖ ಆಟಗಾರರಾಗಿರುವ ವರುಣ್ ಚಕ್ರವರ್ತಿ, ನವೆಂಬರ್ 26ರಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದು, ಇದು ಅವರ ನಾಯಕತ್ವಕ್ಕೆ ಬಲ ನೀಡಲಿದೆ.

1 / 5
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ನಡುವೆ ಭಾರತದ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ರಾಜ್ಯ ತಂಡಗಳನ್ನು ಪ್ರಕಟಿಸಲಾಗುತ್ತಿದೆ. ಆ ಪ್ರಕಾರ, ಈ ಟೂರ್ನಿಗೆ ತಮಿಳುನಾಡು ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕತ್ವವನ್ನು ಕರ್ನಾಟಕದ ಬೀದರ್ ಮೂಲದ ಹುಡುಗ, ಟೀಂ ಇಂಡಿಯಾ ಪರ ವೈಟ್-ಬಾಲ್ ಕ್ರಿಕೆಟ್ ಆಡುವ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಹಿಸಲಾಗಿದೆ.

2 / 5
ಟಿ20 ಸ್ವರೂಪದಲ್ಲಿ ಆಡಲಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಭಾರತ ಟಿ20 ತಂಡದಲ್ಲಿ ಪ್ರಮುಖ ಸ್ಪಿನ್ನರ್ ಆಗಿರುವ ವರುಣ್ ಚಕ್ರವರ್ತಿಗೆ ತಮಿಳುನಾಡು ತಂಡದ ನಾಯಕತ್ವ ನೀಡಲಾಗಿದೆ. ಈ ಪಂದ್ಯಾವಳಿ ನವೆಂಬರ್ 26 ರಂದು ಪ್ರಾರಂಭವಾಗುತ್ತಿದ್ದು ತಮಿಳುನಾಡು ರಾಜಸ್ಥಾನ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

3 / 5
ವರುಣ್ ಚಕ್ರವರ್ತಿ ಪ್ರಸ್ತುತ ಟೀಂ ಇಂಡಿಯಾದ ಟಿ20 ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಭಾರತ ತಂಡದ ಪರ ಕೆಲವು ಏಕದಿನ ಪಂದ್ಯಗಳನ್ನು ಆಡಿರುವ ವರುಣ್, 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದಾಗ್ಯೂ ಗೌತಮ್ ಗಂಭೀರ್ ಕೋಚ್ ಆದ ನಂತರ ವರುಣ್​ಗೆ ಭಾರತ ತಂಡದಲ್ಲಿ ನಿರಂತರವಾಗಿ ಅವಕಾಶ ಸಿಗುತ್ತಿದೆ.

4 / 5
ಇಲ್ಲಿಯವರೆಗೆ, ವರುಣ್ ಚಕ್ರವರ್ತಿ ನಾಲ್ಕು ಏಕದಿನ ಪಂದ್ಯಗಳು ಮತ್ತು 29 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿರುವ ವರುಣ್, 27 ಟಿ20 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 15.68 ರ ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 17 ರನ್​ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

5 / 5
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ತಮಿಳುನಾಡು ತಂಡ: ವರುಣ್ ಚಕ್ರವರ್ತಿ (ನಾಯಕ), ನಾರಾಯಣ ಜಗದೀಸನ್ (ಉಪನಾಯಕ, ವಿಕೆಟ್ ಕೀಪರ್), ತುಷಾರ್ ರಹೇಜಾ (ವಿಕೆಟ್ ಕೀಪರ್), ಅಮಿತ್ ಸಾತ್ವಿಕ್, ಶಾರುಖ್ ಖಾನ್, ಆಂಡ್ರೆ ಸಿದ್ಧಾರ್ಥ್, ಪ್ರದೋಶ್ ರಂಜನ್ ಪಾಲ್, ಶಿವಂ ಸಿಂಗ್, ಆರ್. ಸಾಯಿ ಕಿಶೋರ್, ಎಂ. ಸಿದ್ಧಾರ್ಥ್, ಟಿ. ನಟರಾಜನ್, ಗುರ್ಜಪ್ನೀತ್ ಸಿಂಗ್, ಎ. ಎಸಕ್ಕಿಮುತ್ತು, ಸೋನು ಯಾದವ್, ಆರ್. ಸಿಲಂಬರಸನ್, ರಿತಿಕ್ ಈಶ್ವರನ್ (ವಿಕೆಟ್ ಕೀಪರ್).