Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ವಿಕೆಟ್ ಕಬಳಿಸಿಯೂ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ ವರುಣ್ ಚಕ್ರವರ್ತಿ

Varun Chakravarthy: ಟಿ20 ಸರಣಿಗಳಲ್ಲಿ ಬ್ಯಾಕ್ ಟು ಬ್ಯಾಕ್ 5 ವಿಕೆಟ್ ಕಬಳಿಸಿದ ವಿಶೇಷ ದಾಖಲೆಯೊಂದನ್ನು ವರುಣ್ ಚಕ್ರವರ್ತಿ ನಿರ್ಮಿಸಿದ್ದಾರೆ. ಆದರೆ ಈ ದಾಖಲೆಯ ಹೊರತಾಗಿಯೂ ಅನಗತ್ಯದ ರೆಕಾರ್ಡ್ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಎರಡು ಪಂದ್ಯಗಳಲ್ಲಿನ ಟೀಮ್ ಇಂಡಿಯಾದ ಸೋಲು.

ಝಾಹಿರ್ ಯೂಸುಫ್
|

Updated on: Jan 29, 2025 | 3:00 PM

ಭಾರತ ತಂಡದ ಪರ ಟಿ20 ಕ್ರಿಕೆಟ್​ನಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ್ದು ಕೇವಲ ಮೂವರು ಬೌಲರ್​ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ಬೌಲರ್ ಭುವನೇಶ್ವರ್ ಕುಮಾರ್. ಆ ಬಳಿಕ ಕುಲ್ದೀಪ್ ಯಾದವ್ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಇವರಿಬ್ಬರ ದಾಖಲೆಯನ್ನು ಸರಿಗಟ್ಟಿ ವರುಣ್ ಚಕ್ರವರ್ತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

1 / 5
ಆದರೆ ಈ ಸಾಧನೆಯ ಹೊರತಾಗಿಯೂ ವರುಣ್ ಚಕ್ರವರ್ತಿ ಹೆಸರಿಗೆ ಅನಗತ್ಯ ದಾಖಲೆಯೊಂದು ಸೇರ್ಪಡೆಯಾಗಿದೆ. ಅದು ಕೂಡ ಎರಡು ಬಾರಿ 5 ವಿಕೆಟ್​ಗಳನ್ನು ಕಬಳಿಸಿ ಎಂಬುದೇ ಅಚ್ಚರಿ. ಅಂದರೆ ವರುಣ್ ಚಕ್ರವರ್ತಿ 2 ಬಾರಿ ಐದು ವಿಕೆಟ್ ಪಡೆದರೂ ಆ ಪಂದ್ಯಗಳನ್ನು ಭಾರತ ತಂಡ ಗೆದ್ದಿಲ್ಲ.

2 / 5
2024 ರಲ್ಲಿ ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾದ ವಿರುದ್ಧದ ಟಿ20 ತಂಡದಲ್ಲಿ ಪಂದ್ಯದಲ್ಲಿ ವರುಣ್ 17 ರನ್​ಗೆ 5 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದೀಗ ರಾಜ್​ಕೋಟ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ವರುಣ್ 24 ರನ್​ ನೀಡಿ 5 ವಿಕೆಟ್ ಪಡೆದಿದ್ದಾರೆ. ಈ ಮ್ಯಾಚ್​ನಲ್ಲೂ ಭಾರತ ತಂಡ 26 ರನ್​ಗಳಿಂದ ಸೋಲನುಭವಿಸಿದೆ.

3 / 5
ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸೋತ ಪಂದ್ಯಗಳಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ ಅನಗತ್ಯ ದಾಖಲೆಯೊಂದು ವರುಣ್ ಚಕ್ರವರ್ತಿ ಪಾಲಾಗಿದೆ. ಇಲ್ಲಿ ವರುಣ್ ಅವರ ತಪ್ಪು ಏನೂ ಇಲ್ಲದಿದ್ದರೂ, ಟೀಮ್ ಇಂಡಿಯಾ ಸ್ಪಿನ್ನರ್​​ನ ಹೆಸರು ಅನಗತ್ಯ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದು ಮಾತ್ರ ವಿಪರ್ಯಾಸ.

4 / 5
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಸರಣಿಯು 2-1 ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ 4ನೇ ಮ್ಯಾಚ್ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ, ಇಂಗ್ಲೆಂಡ್ ತಂಡವು ನಾಲ್ಕನೇ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿ 4ನೇ ಮ್ಯಾಚ್​ನಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

5 / 5
Follow us
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು

ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ

ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ

Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು

ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ

ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?

ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ

ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂದರ್ಭದ ವಿಡಿಯೋ