- Kannada News Photo gallery Cricket photos Since joining RCB, Phil Salt's T20I form seems to have hit a Salt Break
RCB ಸೇರಿದ ಬಳಿಕ ಸಪ್ಪೆಯಾದ ಸಾಲ್ಟ್
Phil Salt: ಐಪಿಎಲ್ 2024 ರಲ್ಲಿ ಫಿಲ್ ಸಾಲ್ಟ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು. ಕೆಕೆಆರ್ ಪರ 12 ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಿದ್ದ ಸಾಲ್ಟ್ 4 ಅರ್ಧಶತಕಗಳೊಂದಿಗೆ ಒಟ್ಟು 435 ರನ್ ಬಾರಿಸಿ ಅಬ್ಬರಿಸಿದ್ದರು. ಈ ಟೂರ್ನಿಯ ಬೆನ್ನಲ್ಲೇ ಇಂಗ್ಲೆಂಡ್ ಪರ ಕೂಡ ಆರಂಭಿಕನಾಗಿ ಸಿಡಿಲಬ್ಬರದ ಮುಂದುವರೆಸಿದ್ದರು. ಈ ಭರ್ಜರಿ ಪ್ರದರ್ಶನವನ್ನು ಗಮನಿಸಿದ ಆರ್ಸಿಬಿ ಸಾಲ್ಟ್ ಅವರನ್ನು ಈ ಬಾರಿ ಆರಂಭಿಕನಾಗಿ ಆಯ್ಕೆ ಮಾಡಿಕೊಂಡಿದೆ.
Updated on:Jan 29, 2025 | 12:30 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 11 ಕೋಟಿ ರೂ. ನೀಡಿ ಇಂಗ್ಲೆಂಡ್ ದಾಂಡಿಗ ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಈ ಖರೀದಿಗೆ ಮುಖ್ಯ ಕಾರಣ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಆದರೆ ಆರ್ಸಿಬಿ ಸೇರಿದ ಬಳಿಕ ಸಾಲ್ಟ್ ಅವರ ಸಿಡಿಲಬ್ಬರದ ಮಾಯವಾಗಿದೆ.

ಹೌದು, ಮೆಗಾ ಹರಾಜಿಗೂ ಮುನ್ನ ಫಿಲ್ ಸಾಲ್ಟ್ ಭರ್ಜರಿ ಫಾರ್ಮ್ನಲ್ಲಿದ್ದರು. ಆರ್ಸಿಬಿ ಸೇರುವ ಮುನ್ನ ಆಡಿದ 4 ಪಂದ್ಯಗಳಲ್ಲಿ 103, 41, 33 ಹಾಗೂ 58 ರನ್ಗಳ ಸ್ಪೋಟಕ ಇನಿಂಗ್ಸ್ ಆಡಿ ಅಬ್ಬರಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್ ನೋಡಿದ್ದ ಆರ್ಸಿಬಿ ಫ್ರಾಂಚೈಸಿ ಫಿಲ್ ಸಾಲ್ಟ್ ಖರೀದಿಗಾಗಿ ಮೆಗಾ ಹರಾಜಿನಲ್ಲಿ ಭರ್ಜರಿ ಪೈಪೋಟಿ ನಡೆಸಿತು.

ಈ ಪೈಪೋಟಿಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 11 ಕೋಟಿ ರೂ. ನೀಡಿ ಸಾಲ್ಟ್ ಅವರನ್ನು ಖರೀದಿಸಿದೆ. ಆದರೆ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಫಿಲ್ ಸಾಲ್ಟ್ ಅವರ ಬ್ಯಾಟ್ ಸೈಲೆಂಟ್ ಆಗಿದೆ. ಕೊನೆಯ ಮೂರು ಪಂದ್ಯಗಳಲ್ಲೂ ಒಂದಂಕಿ ರನ್ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿದ್ದಾರೆ.

ಫಿಲ್ ಸಾಲ್ಟ್ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳನ್ನಾಡಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಮ್ಯಾಚ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸಾಲ್ಟ್, ಚೆನ್ನೈನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ರಾಜ್ಕೋಟ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 5 ರನ್ಗಳಿಸಿ ನಿರಾಸೆ ಮೂಡಿಸಿದ್ದಾರೆ.

ಅಂದರೆ ಆರ್ಸಿಬಿಗೆ ಬರುವ ಮುನ್ನ ಸಿಡಿಲಬ್ಬರದ ಪ್ರದರ್ಶಿಸಿದ್ದ ಸಾಲ್ಟ್, ಆರ್ಸಿಬಿಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಮಂಕಾಗಿದ್ದಾರೆ. ಅದು ಕೂಡ ಕಳೆದ ಮೂರು ಪಂದ್ಯಗಳಲ್ಲಿ ಒಂದಂಕಿ ರನ್ಗಳಿಸುವ ಮೂಲಕ ಎಂಬುದೇ ಅಚ್ಚರಿ. ಇದೀಗ ಮೂರು ಪಂದ್ಯಗಳಲ್ಲಿ ವಿಫಲರಾಗಿರುವ ಫಿಲ್ ಸಾಲ್ಟ್ ಅವರನ್ನು ನಾಲ್ಕನೇ ಮ್ಯಾಚ್ನಲ್ಲಿ ಇಂಗ್ಲೆಂಡ್ ಕಣಕ್ಕಿಳಿಸಲಿದೆಯಾ ಎಂಬುದೇ ಪ್ರಶ್ನೆ. ಒಂದು ವೇಳೆ ಕಣಕ್ಕಿಳಿಸದಿದ್ದರೆ ಸಾಲ್ಟ್ ಇಂಗ್ಲೆಂಡ್ ಪಾಲಿಗೂ ರುಚಿಸುತ್ತಿಲ್ಲ ಎಂಬುದು ಕನ್ಫರ್ಮ್ ಆಗಲಿದೆ.
Published On - 10:30 am, Wed, 29 January 25



















