Vijay Hazare Trophy 2021: ಬಲಿಷ್ಠ ತಮಿಳುನಾಡಿಗೆ ಬಿಗ್ ಶಾಕ್: 1 ರನ್​ಗಳ ರೋಚಕ ಜಯ

Edited By:

Updated on: Dec 12, 2021 | 10:28 PM

Vijay Hazare Trophy 2021: ಇದಕ್ಕೆ ಉತ್ತರವಾಗಿ ತಮಿಳುನಾಡು ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 44 ಓವರ್‌ಗಳಲ್ಲಿ 206 ರನ್‌ಗಳ ಗುರಿ ಪಡೆಯಿತು. ತಂಡದ ಪರ ನಾಯಕ ನಾರಾಯಣ್ ಜಗದೀಸನ್ ಮತ್ತು ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಅರ್ಧಶತಕಗಳನ್ನು ಬಾರಿಸಿದರು.

1 / 5
ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ತಮಿಳುನಾಡು ತಂಡಕ್ಕೆ ಪುದುಚೇರಿ ತಂಡವು ಶಾಕ್ ನೀಡಿದೆ. ಬಲಿಷ್ಠ ಆಟಗಾರರನ್ನೇ ತುಂಬಿರುವ ತಮಿಳುನಾಡು ತನ್ನ ನೆರೆಯ ಪುದುಚೇರಿ ವಿರುದ್ದ ಕೇವಲ 1 ರನ್‌ಗಳಿಂದ ಸೋಲನುಭವಿಸಿದೆ. ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದ್ದ ತಮಿಳುನಾಡು ತಂಡ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಮೋಘ ಪ್ರದರ್ಶನ ಮುಂದುವರೆಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಪುದುಚೇರಿ ಸೋಲುಣಿಸುವ ಮೂಲಕ ಜಯ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.

2 / 5
ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪುದುಚೇರಿ ನಿಗದಿತ 49 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ತಂಡದ ಪರ ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್ ಫಾಬಿದ್ ಅಹ್ಮದ್ ಗರಿಷ್ಠ 87 ರನ್ ಗಳಿಸಿದರು. 84 ಎಸೆತಗಳನ್ನು ಎದುರಿಸಿದ ಫಾಬಿದ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು.

3 / 5
ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಪುದುಚೇರಿಯನ್ನು ಈ ಸಣ್ಣ ಸ್ಕೋರ್‌ನಲ್ಲಿ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.  10-ಓವರ್‌ಗಳ ಆಫ್-ಸ್ಪಿನ್ ಬೌಲಿಂಗ್‌ನಲ್ಲಿ 48 ರನ್‌ಗಳಿಗೆ 5 ವಿಕೆಟ್ ಪಡೆದು ಸುಂದರ್ ಮಿಂಚಿದ್ದರು.

4 / 5
ಇದಕ್ಕೆ ಉತ್ತರವಾಗಿ ತಮಿಳುನಾಡು ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 44 ಓವರ್‌ಗಳಲ್ಲಿ 206 ರನ್‌ಗಳ ಗುರಿ ಪಡೆಯಿತು. ತಂಡದ ಪರ ನಾಯಕ ನಾರಾಯಣ್ ಜಗದೀಸನ್ ಮತ್ತು ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಅರ್ಧಶತಕಗಳನ್ನು ಬಾರಿಸಿದರು.

5 / 5
ಆದರೆ ತಂಡವು ಕೇವಲ 204 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪುದುಚೇರಿ ತಂಡವು 1 ರನ್​ನ ರೋಚಕ ಜಯ ಸಾಧಿಸಿತು. ಇನ್ನು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಫಾಬಿದ್ ಬೌಲಿಂಗ್​ನಲ್ಲೂ ಮಿಂಚಿದ್ದರು. ಆಫ್ ಬ್ರೇಕ್ ನ ಮ್ಯಾಜಿಕ್ ಪ್ರದರ್ಶಿಸಿದ ಫಾಬಿದ್ 9 ಓವರ್ ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಪಡೆದರು.