- Kannada News Photo gallery Cricket photos Vinod Kambli New Look during Wankhede Stadium’s 50th anniversary event
ಆರೋಗ್ಯದಲ್ಲಿ ಚೇತರಿಕೆ, ಹೊಸ ಲುಕ್ನಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ
Vinod Kambli: ವಿನೋದ್ ಕಾಂಬ್ಳಿ ಟೀಮ್ ಇಂಡಿಯಾ ಒಟ್ಟು 121 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಟೆಸ್ಟ್ ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 97 ಏಕದಿನ ಇನಿಂಗ್ಸ್ಗಳಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ ಬಾರಿಸಿದ್ದಾರೆ.
Updated on: Jan 13, 2025 | 12:10 PM

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕಳೆದ ಕೆಲ ತಿಂಗಳಿಂದ ಅನಾರೋಗ್ಯದ ಕಾರಣ ಸುದ್ದಿಯಲ್ಲಿದ್ದರು. ಅದರಲ್ಲೂ ಕಳೆದ ತಿಂಗಳು ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರು ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಕಾಂಬ್ಳಿ ಮನೆಗೆ ಹಿಂತಿರುಗಿದ್ದಾರೆ.

ಆದರೆ ಚಿಕಿತ್ಸೆಯ ಬಳಿಕ ವಿನೋದ್ ಕಾಂಬ್ಳಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಅವರ ಆರೋಗ್ಯದ ಮಾಹಿತಿ ಕೂಡ ಹೊರಬಿದ್ದಿರಲಿಲ್ಲ. ಇದೀಗ ಅವರ ಆರೋಗ್ಯದಲ್ಲಿ ಮಹತ್ವದ ಬದಲಾವಣೆಯಾಗಿರುವುದು ಕಂಡು ಬಂದಿದೆ. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಸೊರಗಿದ್ದ ಕಾಂಬ್ಳಿ ಇದೀಗ ಮತ್ತೆ ಹಳೆಯ ಖದರ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಈ ಹಿಂದಿನಂತೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಸ್ಟ್ರೈಲಿಸ್ಟ್ ಲುಕ್ನೊಂದಿಗೆ ಎಂಬುದು ವಿಶೇಷ. ಇನ್ನು ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದ್ದರೂ, ನಡೆಯುವಾಗ ಈಗಲೂ ಸ್ವಲ್ಪ ಕಷ್ಟಪಡುತ್ತಿದ್ದಾರೆ.

ಇದಾಗ್ಯೂ ಅವರು ಈ ಕಾರ್ಯಕ್ರಮದಲ್ಲಿ ತುಂಬಾ ಸಂತೋಷದಿಂದ ಮತ್ತು ಲವಲವಿಕೆಯಿಂದ ಕಾಣಿಸಿಕೊಂಡಿದ್ದರು. ಇದೇ ವೇಳೆ ಸ್ಮರಣಿಕೆ ನೀಡುವ ಮೂಲಕ ಕಾಂಬ್ಳಿ ಅವರನ್ನು ಗೌರವಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ದಂತಕಥೆ ಸುನಿಲ್ ಗವಾಸ್ಕರ್ ಜೊತೆ ಫೋಟೋ ಕ್ಲಿಕ್ಕಿಸುವ ಮೂಲಕ ಕಾಂಬ್ಳಿ ಕುಶಲೋಪರಿಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ವಿನೋದ್ ಕಾಂಬ್ಳಿ ಅವರ ನ್ಯೂ ಲುಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿನೋದ್ ಕಾಂಬ್ಳಿ ಭಾರತದ ಪರ 17 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 2 ಭರ್ಜರಿ ಶತಕ ಹಾಗೂ 14 ಅರ್ಧಶತಕಗಳೊಂದಿಗೆ ಒಟ್ಟು 2477 ರನ್ಗಳಿಸಿದ್ದಾರೆ.



















