Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಲ್ಲಿಸ್ ಪೆರ್ರಿ

Virat Kohli - Ellyse Perry ಭಾರತೀಯ ಅಂಗಳದ ಎರಡು ಪ್ರಮುಖ ಫ್ರಾಂಚೈಸಿ ಟೂರ್ನಿಗಳೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ವುಮೆನ್ಸ್ ಪ್ರೀಮಿಯರ್ ಲೀಗ್​. ಈ ಎರಡು ಲೀಗ್​ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿರುವುದು RCB ಪ್ಲೇಯರ್ಸ್ ಎಂಬುದು ವಿಶೇಷ. ಇಲ್ಲಿ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಕಿಂಗ್ ಎನಿಸಿಕೊಂಡರೆ, ಡಬ್ಲ್ಯೂಪಿಎಲ್​ನಲ್ಲಿ ಎಲ್ಲಿಸ್ ಪೆರ್ರಿ ಕ್ವೀನ್ ಎನಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Feb 26, 2025 | 9:04 AM

ಭಾರತೀಯ ಟಿ20 ಲೀಗ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದವರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯರ್ಸ್ ಅಗ್ರಸ್ಥಾನಕ್ಕೇರಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ ಈ ಹಿಂದೆಯೇ ಮೊದಲ ಸ್ಥಾನ ಅಲಂಕರಿಸಿದ್ದರೆ, ಎಲ್ಲಿಸ್ ಪೆರ್ರಿ ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​​​ನ ಟಾಪ್ ರನ್ ಸರದಾರಿಣಿ ಎನಿಸಿಕೊಂಡಿದ್ದಾರೆ.

1 / 5
ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಪರ 21 ಪಂದ್ಯಗಳನ್ನಾಡಿರುವ ಎಲ್ಲಿಸ್ ಪೆರ್ರಿ 64.23ರ ಸರಾಸರಿಯಲ್ಲಿ ಒಟ್ಟು 835 ರನ್ ಕಲೆಹಾಕಿದ್ದಾರೆ. ಈ ವೇಳೆ 7 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಇನ್ನು ಈ 21 ಇನಿಂಗ್ಸ್​ಗಳಲ್ಲಿ 8 ಬಾರಿ ಅವರು ಅಜೇಯರಾಗಿದ್ದರು ಎಂಬುದು ವಿಶೇಷ.

2 / 5
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. RCB ಪರ 252 ಪಂದ್ಯಗಳಲ್ಲಿ 244 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 8 ಶತಕಗಳೊಂದಿಗೆ ಈವರೆಗೆ ಒಟ್ಟು 8004 ರನ್ ಕಲೆಹಾಕಿದ್ದಾರೆ.

3 / 5
ಈ ಮೂಲಕ ವಿರಾಟ್ ಕೊಹ್ಲಿ IPL ​ಇತಿಹಾಸದಲ್ಲೇ 8000 ಸಾವಿರ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇತ್ತ WPL ನಲ್ಲಿ 800 ರನ್​ಗಳ ಗಡಿದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಎಲ್ಲಿಸ್ ಪೆರ್ರಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆರ್​ಸಿಬಿ ಪ್ಲೇಯರ್ಸ್ ಭಾರತೀಯ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 5
ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನಲ್ಲಿ ಆರ್​ಸಿಬಿ ತಂಡಕ್ಕೆ ಇನ್ನೂ 4 ಪಂದ್ಯಗಳು ಉಳಿದಿದ್ದು, ಈ ಮ್ಯಾಚ್​ಗಳ ಮೂಲಕ 165 ರನ್​ ಕಲೆಹಾಕಿದರೆ ಎಲ್ಲಿಸ್ ಪೆರ್ರಿ WPL ಇತಿಹಾಸದಲ್ಲಿ 1000 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿಯ WPL ನಲ್ಲಿ ಪೆರ್ರಿ ಕಡೆಯಿಂದ ಈ ಭರ್ಜರಿ ದಾಖಲೆಯನ್ನು ಸಹ ನಿರೀಕ್ಷಿಸಬಹುದು.

5 / 5
Follow us