Updated on: Jul 18, 2023 | 9:47 AM
ಭಾರತೀಯ ಆಯ್ಕೆ ಸಮಿತಿ 2024 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಟಿ20 ಸರಣಿಗೆ ಕೇವಲ ಯುವ ಆಟಗಾರರನ್ನು ಮಾತ್ರ ಆಯ್ಕೆ ಮಾಡುತ್ತಿದೆ. ಹಿರಿಯ ಆಟಗಾರರನ್ನು ಕೈಬಿಡಲಾಗುತ್ತಿದೆ.
ಈಗ ಇದೇ ಹಾದಿಯನ್ನ ಮುಂದುವರೆಸುತ್ತಿರುವ ಆಯ್ಕೆ ಸಮಿತಿ ಐರ್ಲೆಂಡ್ ವಿರುದ್ಧದ ಸರಣಿಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ ಎಂದು ವರದಿ ಆಗಿದೆ.
ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯದ ಬಳಿಕ ಭಾರತ ಐರ್ಲೆಂಡ್ಗೆ ತೆರಳಲಿದ್ದು, ಅಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕೆ ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಪ್ರಕಟವಾಗಲಿದೆ.
ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರಂತೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ರೋಹಿತ್, ಕೊಹ್ಲಿಯನ್ನು ಏಕದಿನ, ಟೆಸ್ಟ್ ಪಂದ್ಯಕ್ಕೆ ಮಾತ್ರ ಪರಿಗಣಿಸಿ ಟಿ20 ಯಿಂದ ಸಂಪೂರ್ಣ ಕೈಬಿಡುವ ಸಾಧ್ಯತೆ ಇದೆ.
ಗಮನಿಸಬೇಕಾದ ಸಂಗತಿ ಎಂದರೆ ವಿರಾಟ್ ಹಾಗೂ ರೋಹಿತ್ ಅವರು ಟಿ20 ವಿಶ್ವಕಪ್ 2022ರಲ್ಲಿ ಭಾರತ ಸೋತ ಬಳಿಕ ಒಂದೇ ಒಂದು ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ.
ಟಿ20 ವಿಶ್ವಕಪ್ನಲ್ಲಿ ಭಾರತ ಸೋಲುಂಡ ಬಳಿಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅಧಿಕೃತವಾಗಿ ಅವರಿಗೆ ಇನ್ನೂ ನಾಯಕತ್ವ ನೀಡಲಾಗಿಲ್ಲ. ಏಕದಿನ ವಿಶ್ವಕಪ್ ನಂತರ T20I ನಾಯಕತ್ವದ ಬಗ್ಗೆ ಆಯ್ಕೆಗಾರರು ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.
ಟೀಮ್ ಇಂಡಿಯಾ ಮೂರು T20Iಗಳಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದು ಆಗಸ್ಟ್ 18, 20 ಮತ್ತು 23 ರಂದು ಆಡಲಿದೆ. ಕ್ರಿಕ್‌ಬಜ್‌ನಲ್ಲಿನ ವರದಿಯು ರಾಹುಲ್ ದ್ರಾವಿಡ್ ಮತ್ತು ಅವರ ಕೋಚಿಂಗ್ ಸಿಬ್ಬಂದಿಗೆ ಐರ್ಲೆಂಡ್ ಸರಣಿಗೆ ವಿಶ್ರಾಂತಿ ನೀಡಲಾಗುತ್ತದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಿರಲಿದ್ದಾರೆ.