- Kannada News Photo gallery Cricket photos Virat Kohli and Shubman Gill: Captaincy Debut and Batting Average Boost
ವಿರಾಟ್ ಕೊಹ್ಲಿ ಹಾದಿಯಲ್ಲಿ ನಾಯಕ ಶುಭ್‌ಮನ್ ಗಿಲ್
Virat Kohli and Shubman Gill: ವಿರಾಟ್ ಕೊಹ್ಲಿಯಂತೆಯೇ ನಾಯಕತ್ವ ಸಿಕ್ಕ ಬಳಿಕ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಸರಾಸರಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ವಿರಾಟ್ 2014 ರಲ್ಲಿ ನಾಯಕನಾಗಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ಆ ಸರಣಿಯಲ್ಲಿ ಕೊಹ್ಲಿ 692 ರನ್ ಬಾರಿಸಿದರೆ, ಇತ್ತ ಶುಭಮನ್ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ 754 ರನ್ ಬಾರಿಸಿದ್ದಾರೆ.
Updated on: Aug 06, 2025 | 5:50 PM

ಶುಭ್‌ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಪ್ರವಾಸದಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಬಲಿಷ್ಠ ಆಂಗ್ಲರನ್ನು ಅವರ ನೆಲದಲ್ಲೇ ಸರಣಿ ಗೆಲ್ಲದಂತೆ ತಡೆದು ನಿಲ್ಲಿಸಿದ್ದಾರೆ. ಈ ಪ್ರವಾಸದಲ್ಲಿ ಗಿಲ್ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಸಾಕಷ್ಟು ಸುಧಾರಿಸಿದ್ದಾರೆ. ಟೆಸ್ಟ್‌ನಲ್ಲಿ ಕಳಪೆ ಫಾರ್ಮನಿಂದ ಬಳಲುತ್ತಿದ್ದ ಗಿಲ್, ನಾಯಕತ್ವ ಸಿಕ್ಕ ಬಳಿಕ ಫಾರ್ಮ್ ಕಂಡುಕೊಂಡಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾದಿಯನ್ನೇ ತುಳಿದಿದ್ದಾರೆ.

ವಾಸ್ತವವಾಗಿ ವಿರಾಟ್ ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ನಾಯಕತ್ವದ ಚೊಚ್ಚಲ ಟೆಸ್ಟ್ ಸರಣಿಯನ್ನು ಆಡಿದ್ದರು. ಆ ಸರಣಿಗೂ ಮೊದಲು, ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಹೆಚ್ಚಿರಲಿಲ್ಲ. ಟೆಸ್ಟ್‌ನಲ್ಲಿ ವಿರಾಟ್ ಅವರ ಬ್ಯಾಟಿಂಗ್ ಸರಾಸರಿ 39.46 ಅಂದರೆ 40 ಕ್ಕಿಂತ ಕಡಿಮೆಯಿತ್ತು. ಆದರೆ ನಾಯಕನಾಗಿ, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರನ್ ಮಳೆ ಹರಿಸಿದ್ದ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 46.30ಕ್ಕೆ ಏರಿತ್ತು.

ಇದೀಗ ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯ ನಂತರ ಶುಭ್‌ಮನ್ ಗಿಲ್ ಅವರ ಬ್ಯಾಟಿಂಗ್ ಸರಾಸರಿಯಲ್ಲೂ ಏರಿಕೆ ಕಂಡುಬಂದಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು, ಶುಭ್‌ಮನ್ ಗಿಲ್ ಅವರ ಟೆಸ್ಟ್‌ಗಳಲ್ಲಿ ಬ್ಯಾಟಿಂಗ್ ಸರಾಸರಿ 35.05 ಆಗಿತ್ತು. ಇದೀಗ ಇಂಗ್ಲೆಂಡ್ ಪ್ರವಾಸವನ್ನು ಅಬ್ಬರದೊಂದಿಗೆ ಮುಗಿಸಿ ಬಂದಿರುವ ಗಿಲ್ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ಈಗ 41.35 ಆಗಿದೆ.

ಧೋನಿಯ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕೊಹ್ಲಿ 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಆ ಪ್ರವಾಸದಲ್ಲಿ ಕೊಹ್ಲಿ ಆಡಿದ 4 ಟೆಸ್ಟ್‌ಗಳ 8 ಇನ್ನಿಂಗ್ಸ್‌ಗಳಲ್ಲಿ 86.50 ಸರಾಸರಿಯಲ್ಲಿ 692 ರನ್ ಕಲೆಹಾಕಿದ್ದರು. ಇದರಲ್ಲಿ 4 ಶತಕಗಳು ಸೇರಿದ್ದವು.

ಅದೇ ರೀತಿ, ಇಂಗ್ಲೆಂಡ್ ಪ್ರವಾಸದೊಂದಿಗೆ ಭಾರತ ಟೆಸ್ಟ್ ತಂಡದ ಚುಕ್ಕಾಣಿ ಹಿಡಿದಿದ್ದ ಶುಭಮನ್ ಗಿಲ್ ಕೂಡ ಗಮನಾರ್ಹ ಪ್ರದರ್ಶನ ನೀಡಿದರು. ಈ ಪ್ರವಾಸದಲ್ಲಿ ಆಡಿದ 5 ಟೆಸ್ಟ್‌ಗಳ 10 ಇನ್ನಿಂಗ್ಸ್‌ಗಳಲ್ಲಿ ಗಿಲ್ 75 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 754 ರನ್ ಕಲೆಹಾಕಿದರು. ಇಡೀ ಸರಣಿಯಲ್ಲಿ 4 ಶತಕಗಳನ್ನು ಬಾರಿಸಿದರು




