- Kannada News Photo gallery Cricket photos Virat Kohli Hardik Pandya: India Highest 5th Wicket Partnership in T20I 2022
India vs Pakistan: ಪಾಕ್ಗೆ ಮಣ್ಣು ಮುಕ್ಕಿಸಿ ಹೊಸ ದಾಖಲೆ ಬರೆದ ಪಾಂಡ್ಯ-ಕೊಹ್ಲಿ
Virat Kohli-Hardik Pandya: ಐದನೇ ವಿಕೆಟ್ಗೆ ಜೊತೆಯಾದ ಈ ಜೋಡಿಯನ್ನು ಬೇರ್ಪಡಿಸಲು ಪಾಕ್ ಬೌಲರ್ಗಳು ಹರಸಾಹಸಪಡಬೇಕಾಯಿತು. ಇತ್ತ ಉತ್ತಮ ಹೊಂದಾಣಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ-ಪಾಂಡ್ಯ ಶತಕದ ಜೊತೆಯಾಟವಾಡಿದರು.
Updated on: Oct 23, 2022 | 9:58 PM

ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಈ ಗೆಲುವಿನ ರೂವಾರಿಗಳೆಂದರೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ.

ಏಕೆಂದರೆ ಕೇವಲ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ.

ಐದನೇ ವಿಕೆಟ್ಗೆ ಜೊತೆಯಾದ ಈ ಜೋಡಿಯನ್ನು ಬೇರ್ಪಡಿಸಲು ಪಾಕ್ ಬೌಲರ್ಗಳು ಹರಸಾಹಸಪಡಬೇಕಾಯಿತು. ಇತ್ತ ಉತ್ತಮ ಹೊಂದಾಣಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ-ಪಾಂಡ್ಯ ಶತಕದ ಜೊತೆಯಾಟವಾಡಿದರು.

37 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ ಹಾರ್ದಿಕ್ ಪಾಂಡ್ಯ ಕೊಹ್ಲಿಯ ಅಬ್ಬರಕ್ಕೆ ಸಾಥ್ ನೀಡಿದರು. ಪರಿಣಾಮ 5ನೇ ವಿಕೆಟ್ಗೆ ಬರೋಬ್ಬರಿ 113 ರನ್ಗಳ ಭರ್ಜರಿ ಜೊತೆಯಾಟ ಮೂಡಿಬಂತು.

ಇದರೊಂದಿಗೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 5ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಪಾತ್ರರಾದರು.

ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧ ಐದನೇ ವಿಕೆಟ್ಗೆ 91 ರನ್ಗಳಿಸಿದ್ದು ದಾಖಲೆಯಾಗಿತ್ತು.

ಇದೀಗ ಬರೋಬ್ಬರಿ 113 ರನ್ಗಳ ಜೊತೆಯಾಟವಾಡುವ ಮೂಲಕ ಕಿಂಗ್ ಕೊಹ್ಲಿ - ಪವರ್ ಪಾಂಡ್ಯ ವಿಶೇಷ ದಾಖಲೆ ಬರೆದರು. ಅಲ್ಲದೆ ಅಜೇಯ 82 ರನ್ ಬಾರಿಸಿ ವಿರಾಟ್ ಕೊಹ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.




