- Kannada News Photo gallery Cricket photos Virat Kohli has made no official request for break as of now: BCCI official
Virat Kohli: ದಕ್ಷಿಣ ಆಫ್ರಿಕಾ ವಿರುದ್ದ ವಿರಾಟ್ ಕೊಹ್ಲಿ ಏಕದಿನ ಸರಣಿ ಆಡುವ ಸಾಧ್ಯತೆ..!
India vs South Africa: ಡಿಸೆಂಬರ್ 26 ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿರುವ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಕೊಹ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
Updated on: Dec 14, 2021 | 7:18 PM

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೈಯುಕ್ತಿಕ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಕೊಹ್ಲಿ ಇದುವರೆಗೆ ಏಕದಿನ ಸರಣಿಯಿಂದ ಕೈ ಬಿಡುವಂತೆ ಯಾವುದೇ ಮನವಿ ಮಾಡಿಲ್ಲ. ಅಂದರೆ ಕೊಹ್ಲಿ ಈ ಬಗ್ಗೆ ಯಾವುದೇ ರಜೆಯನ್ನು ಕೇಳಿಲ್ಲ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಆಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ 26 ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿರುವ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಕೊಹ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಸರಣಿಯ ಕೊನೆಯ ಟೆಸ್ಟ್ ಜನವರಿ 15 ರಂದು ಕೇಪ್ ಟೌನ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಜನವರಿ 19ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.

ಉಪನಾಯಕ ರೋಹಿತ್ ಶರ್ಮಾ ಎಡ ಕಾಲಿನ ಸ್ನಾಯುವಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಲು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿತ್ತು.

ಇದೀಗ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ವಿರಾಟ್ ಕೊಹ್ಲಿಇಲ್ಲಿಯವರೆಗೆ, ಏಕದಿನ ಸರಣಿಯಿಂದ ಹೊರಗುಳಿಯುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಕಾರ್ಯದರ್ಶಿ ಜಯ್ ಶಾ ಅವರಿಗೆ ಯಾವುದೇ ಔಪಚಾರಿಕ ಮನವಿಯನ್ನು ಕಳುಹಿಸಿಲ್ಲ. ಜನವರಿ 14 ರ ಬಳಿಕ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೊ ಗೊತ್ತಿಲ್ಲ. ಆದರೆ ಈವರೆಗೆ ಯಾವುದೇ ರಜೆಯನ್ನು ಅಪೇಕ್ಷಿಸದ ಕಾರಣ ಅವರು ಜನವರಿ 19, 21 ಮತ್ತು 23 ರಂದು ನಡೆಯಲಿರುವ ಮೂರು ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಟೀಮ್ ಇಂಡಿಯಾ ಆಟಗಾರರು ತಮ್ಮ ಕುಟುಂಬದೊಂದಿಗೆ ದಕ್ಷಿಣ ಆಫ್ರಿಕಾ ಸರಣಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಅಧಿಕಾರಿ. “ಕ್ಯಾಪ್ಟನ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸಲಿದ್ದಾರೆ. ಇದಾಗ್ಯೂ ಅವರು ಟೆಸ್ಟ್ ಸರಣಿಯ ನಂತರ ಬಯೋ ಬಬಲ್‌ನಿಂದ ದಣಿದಿದ್ದರೆ ಮತ್ತು ವಿಶ್ರಾಂತಿ ಬಯಸಿದರೆ, ಅವರು ಖಂಡಿತವಾಗಿಯೂ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಆಯ್ಕೆ ಸಮಿತಿಯ ಸಂಯೋಜಕರಾಗಿರುವ ಕಾರ್ಯದರ್ಶಿ (ಶಾ) ಅವರಿಗೆ ತಿಳಿಸುತ್ತಾರೆ ಎಂದರು.

ಇನ್ನು ಟೀಮ್ ಇಂಡಿಯಾ ನಾಯಕನ ಜೊತೆ ಕುಟುಂಬಕ್ಕೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಅನುವು ಮಾಡಿಕೊಡಲಿರುವ ಕಾರಣ ಕೊಹ್ಲಿ, ಮಗಳ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅವರು ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕುಟುಂಬದ ಜೊತೆ ಸಮಯ ಕಳೆಯಲು ಬಿಸಿಸಿಐಗೆ ಮನವಿ ಮಾಡಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ಏಕದಿನ ಸರಣಿ ಆಡಲಿದ್ದಾರಾ ಎಂಬುದಕ್ಕೆ ಬುಧವಾರ ಸ್ಪಷ್ಟ ಉತ್ತರ ಸಿಗಲಿದೆ.
