- Kannada News Photo gallery Cricket photos Virat Kohli in post match presentation he said Faf Duplessis batted really well PBKS vs RCB IPL 2023
Virat Kohli: ಭರ್ಜರಿ ಗೆಲುವಿನ ಬಳಿಕ ಡುಪ್ಲೆಸಿಸ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತುಗಳೇನು ಕೇಳಿ
PBKS vs RCB, IPL 2023: ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಪರ ವಿರಾಟ್ ಕೊಹ್ಲಿ (59) ಹಾಗೂ ಫಾಫ್ ಡುಪ್ಲೆಸಿಸ್ (84) ಶತಕದ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು.
Updated on: Apr 21, 2023 | 8:56 AM

ಐಪಿಎಲ್ 2023 ರಲ್ಲಿ ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 24 ರನ್ಗಳ ಭರ್ಜರಿ ಜಯ ಸಾಧಿಸಿತು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೀಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್ನಲ್ಲಿ ಆರ್ಸಿಬಿ ಬ್ಯಾಟಿಂಗ್ - ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ತೋರಿತು.

ವಿರಾಟ್ ಕೊಹ್ಲಿ (59) ಹಾಗೂ ಫಾಫ್ ಡುಪ್ಲೆಸಿಸ್ (84) ಶತಕದ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು. ವನಿಂದು ಹಸರಂಗ 2 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೊಹ್ಲಿ, ಫಾಫ್ ಆಟದ ಬಗ್ಗೆ ಹಾಡಿಹೊಗಳಿದ್ದಾರೆ.

ಇಂತಹ ಕಠಿಣ ಪಿಚ್ನಲ್ಲಿ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್ ನೆರವಿನಿಂದಲೇ ಅಂತಿಮ ಹಂತದಲ್ಲಿ ತಂಡ 20-30 ರನ್ ಹೆಚ್ಚು ಗಳಿಸಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

ಪಾಯಿಂಟ್ ಟೇಬಲ್ ನಮ್ಮ ತಂಡದ ಸ್ಥಿತಿಯನ್ನು ನಿರ್ಧರಿಸುವುದಿಲ್ಲ. ಇನ್ನೂ ಪಂದ್ಯಗಳಿವೆ. ನಾವು ಏನು ಯೋಜನೆ ಮಾಡಬೇಕು ಎಂಬ ಬಗ್ಗೆ ಯೋಚಿಸಬಹುದು. ಪಿಚ್ ಕೆಳಗೆ ತುಂಬಾ ಒರಟಾಗಿತ್ತು, ಅಲ್ಲಿ ಸಾಕಷ್ಟು ನೀರು ಇರಲಿಲ್ಲ. ಸ್ಪಿನ್ನರ್ಗಳ ವಿರುದ್ಧ ಸಿಕ್ಸ್ ಸಿಡಿಸಲು ಆಗುತ್ತಿರಲಿಲ್ಲ-ವಿರಾಟ್ ಕೊಹ್ಲಿ.

ಈ ಪಿಚ್ನಲ್ಲಿ 190 ರನ್ ಗಳಿಸುವುದು ನಮ್ಮ ಪ್ಲಾನ್ ಆಗಿತ್ತು. ಟಾರ್ಗೆಟ್ ದೊಡ್ಡದು ಇರಲಿದೆ ಎಂದು ಬೌಲರ್ಗಳ ಜೊತೆ ಮಾತನಾಡಿಕೊಂಡಿದ್ದೆವು. 6-7 ವಿಕೆಟ್ ಕಳೆದುಕೊಂಡಾಗ ಪಂದ್ಯ ಅಂತಿಮ ಹಂತದ ವರೆಗೆ ಹೋಗಲು ಸಾಧ್ಯವಿಲ್ಲ. ನಮ್ಮ ಬೌಲಿಂಗ್ನಲ್ಲಿ ಸಾಕಷ್ಟು ಆಯ್ಕೆಗಳಿದ್ದವು ಎಂದು ಕೊಹ್ಲಿ ಹೇಳಿದ್ದಾರೆ.

ಪಂದ್ಯ ಅರ್ಧವಾದಾಗ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಸಹಕರಿಸುತ್ತೆ ಎಂಬುದು ತಿಳಿದಿತ್ತು. ಹೀಗಾಗಿ ಪವರ್ ಪ್ಲೇನಲ್ಲಿ 4 ವಿಕೆಟ್ ಪಡೆಯುವುದು ನಮ್ಮ ಟಾರ್ಗೆಟ್ ಆಗಿತ್ತು ಎಂದು ವಿರಾಟ್ ಕೊಹ್ಲಿ ತಮ್ಮ ಗೇಮ್ ಪ್ಲಾನ್ ಬಗ್ಗೆ ವಿವರಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಫಾಫ್ ಡುಪ್ಲೆಸಿಸ್ ಅವರ ಅಜೇಯ 84 ಮತ್ತು ವಿರಾಟ್ ಕೊಹ್ಲಿ ಅವರ 59 ರನ್ಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಹರ್ಪ್ರೀತ್ ಬ್ರಾರ್ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ಪ್ರಭ್ಸಿಮ್ರಾನ್ ಸಿಂಗ್ 46 ಹಾಗೂ ಜಿತೇಶ್ ಶರ್ಮಾ 41 ರನ್ ಗಳಿಸಿದರು. ಪಂಜಾಬ್ 18.2 ಓವರ್ನಲ್ಲಿ 150 ರನ್ಗೆ ಆಲೌಟ್ ಆಯಿತು. ಆರ್ಸಿಬಿ ಪರ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು.




