
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಸೀಸನ್ 16 ರ ಅತ್ಯಂತ ಜನಪ್ರಿಯ ಆಟಗಾರ ಯಾರು? ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಇಂಟರಾಕ್ಟಿವ್ ಅವೆನ್ಯೂ.

ಇಂಟರಾಕ್ಟಿವ್ ಅವೆನ್ಯೂ (ಸೋಷಿಯಲ್ ಮೀಡಿಯಾ ರಿಪೋರ್ಟ್ವರದಿ ಪ್ರಕಾರ, ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದ ಕಿಂಗ್ ಕೊಹ್ಲಿ 14 ಪಂದ್ಯಗಳಲ್ಲಿ 2 ಭರ್ಜರಿ ಶತಕ ಹಾಗೂ 6 ಅರ್ಧಶತಕಗಳೊಂದಿಗೆ 639 ರನ್ ಕಲೆಹಾಕಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಒಟ್ಟು 7 ಮಿಲಿಯನ್ ಉಲ್ಲೇಖಗಳನ್ನು ಹೊಂದಿದ್ದರು. ಹೀಗಾಗಿ ಕಿಂಗ್ ಕೊಹ್ಲಿಯನ್ನು ಈ ಬಾರಿಯ ಐಪಿಎಲ್ನ ಜನಪ್ರಿಯ ಆಟಗಾರನೆಂದು ಆಯ್ಕೆ ಮಾಡಲಾಗಿದೆ.

ಇಂಟರಾಕ್ಟಿವ್ ಅವೆನ್ಯೂ ಬಿಡುಗಡೆ ಮಾಡಿರುವ ಐಪಿಎಲ್ 2023 ರ ಜನಪ್ರಿಯ ಆಟಗಾರರ ಈ ಪಟ್ಟಿ ಈ ಕೆಳಗಿನಂತಿದೆ.

1- ವಿರಾಟ್ ಕೊಹ್ಲಿ (ಆರ್ಸಿಬಿ): 7 ಮಿಲಿಯನ್ ಸೋಷಿಯಲ್ ಮೀಡಿಯಾ ಉಲ್ಲೇಖ.

2- ಎಂಎಸ್ ಧೋನಿ (ಸಿಎಸ್ಕೆ): 6 ಮಿಲಿಯನ್ ಸೋಷಿಯಲ್ ಮೀಡಿಯಾ ಉಲ್ಲೇಖ.

3- ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್): 3 ಮಿಲಿಯನ್ ಸೋಷಿಯಲ್ ಮೀಡಿಯಾ ಉಲ್ಲೇಖ.

4- ಶುಭ್ಮನ್ ಗಿಲ್ (ಗುಜರಾತ್ ಟೈಟಾನ್ಸ್): 1 ಮಿಲಿಯನ್ ಸೋಷಿಯಲ್ ಮೀಡಿಯಾ ಉಲ್ಲೇಖ.

5- ರವೀಂದ್ರ ಜಡೇಜಾ (ಸಿಎಸ್ಕೆ): 1 ಮಿಲಿಯನ್ ಸೋಷಿಯಲ್ ಮೀಡಿಯಾ ಉಲ್ಲೇಖ.