ಅಂದರೆ ಮೊದಲ ಹತ್ತು ವರ್ಷಗಳಲ್ಲಿ 54ರ ಸರಾಸರಿಯಲ್ಲಿ ರನ್ ಕಲೆಹಾಕುತ್ತಾ 27 ಶತಕ ಟೆಸ್ಟ್ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಆ ಬಳಿಕ ನಾಲ್ಕು ವರ್ಷಗಳಲ್ಲಿ 32.73 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಇನ್ನು ಮೂರಂಕಿ ಮೊತ್ತ ಗಳಿಸಿದ್ದು ಕೇವಲ 2 ಬಾರಿ ಮಾತ್ರ. ಹೀಗಾಗಿಯೇ ಆರಂಭಿಕ ಕೊಹ್ಲಿಗೂ ಈಗಿನ ವಿರಾಟ್ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವ್ಯತ್ಯಾಸವನ್ನು ಮುಂಬರುವ ಪಂದ್ಯಗಳ ಮೂಲಕ ಕಿಂಗ್ ಕೊಹ್ಲಿ ಸರಿದೂಗಿಸಲಿದ್ದಾರಾ ಕಾದು ನೋಡಬೇಕಿದೆ.