- Kannada News Photo gallery Cricket photos Virat Kohli's eye on Chris Gayle, Ab de villiers Six record RCB vs KKR IPL 2024
ನೂತನ ದಾಖಲೆ ಮೇಲೆ ಕೊಹ್ಲಿ ಕಣ್ಣು: ಇಂದೇ ಉಡೀಸ್ ಆಗುತ್ತಾ ಗೇಲ್, ಎಬಿಡಿ ರೆಕಾರ್ಡ್?
Virat Kohli Record: ಆರ್‌ಸಿಬಿ ಪರ ಇದುವರೆಗೆ 239 ಐಪಿಎಲ್ ಪಂದ್ಯಗಳಲ್ಲಿ 237 ಸಿಕ್ಸರ್‌ಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ, ಬೆಂಗಳೂರು ಮೂಲದ ಫ್ರಾಂಚೈಸಿಗಾಗಿ ಕ್ರಿಸ್ ಗೇಲ್ ಅವರ 239 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ಮತ್ತು ಮೊದಲ ಕ್ರಿಕೆಟಿಗನಾಗಲು ಮೂರು ಸಿಕ್ಸರ್‌ಗಳ ಅಗತ್ಯವಿದೆ.
Updated on: Mar 29, 2024 | 10:57 AM

ಐಪಿಎಲ್ 2024 ರ ಆರ್‌ಸಿಬಿಯ ಮೂರನೇ ಪಂದ್ಯ ಇಂದು ನಡೆಯಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಡ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಈ ಹೈವೋಲ್ಟೇಜ್ ಪಂದ್ಯದ ವೇಳೆ ಕೊಹ್ಲಿಗೆ ಇತಿಹಾಸ ಸೃಷ್ಟಿಸುವ ಅವಕಾಶ ಸಿಗಲಿದೆ.

ಆರ್‌ಸಿಬಿ ಪರ ಇದುವರೆಗೆ 239 ಐಪಿಎಲ್ ಪಂದ್ಯಗಳಲ್ಲಿ 237 ಸಿಕ್ಸರ್‌ಗಳನ್ನು ಸಿಡಿಸಿರುವ 35 ವರ್ಷದ ಬಲಗೈ ಬ್ಯಾಟರ್, ಬೆಂಗಳೂರು ಮೂಲದ ಫ್ರಾಂಚೈಸಿಗಾಗಿ ಕ್ರಿಸ್ ಗೇಲ್ ಅವರ 239 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ಮತ್ತು ಮೊದಲ ಕ್ರಿಕೆಟಿಗನಾಗಲು ಮೂರು ಸಿಕ್ಸರ್‌ಗಳ ಅಗತ್ಯವಿದೆ.

ಸದ್ಯಕ್ಕೆ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ. ಆರ್ಸಿಬಿಗಾಗಿ 85 ಐಪಿಎಲ್ ಪಂದ್ಯಗಳಲ್ಲಿ 239 ಸಿಕ್ಸರ್‌ಗಳೊಂದಿಗೆ ಗೇಲ್ಸ್ ನಂ. 1 ಸ್ಥಾನದಲ್ಲಿದ್ದಾರೆ ಮತ್ತು 156 ಐಪಿಎಲ್ ಪಂದ್ಯಗಳಲ್ಲಿ 238 ಸಿಕ್ಸರ್‌ಗಳೊಂದಿಗೆ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಕಿಂಗ್ ಕೊಹ್ಲಿ ನೂತನ ದಾಖಲೆ ಬರೆಯುವ ಅವಕಾಶ ಈ ಪಂದ್ಯದಲ್ಲಿದೆ.

ಇಲ್ಲಿಯವರೆಗೆ, ಕೇವಲ ಆರು ಆಟಗಾರರು-ಗೇಲ್, ಡಿವಿಲಿಯರ್ಸ್, ಕೊಹ್ಲಿ, ಕೀರನ್ ಪೊಲಾರ್ಡ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ-ಐಪಿಎಲ್‌ನಲ್ಲಿ ಒಂದು ತಂಡಕ್ಕಾಗಿ 200 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಲೆಜೆಂಡರಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರು ಕನಿಷ್ಠ ಮೂರು ಸಿಕ್ಸರ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ ಗಣ್ಯರ ಪಟ್ಟಿಗೆ ಸೇರುವ ಅವಕಾಶವನ್ನು ಹೊಂದಿದ್ದಾರೆ. ಕಕೆಆರ್ ಫ್ರಾಂಚೈಸಿಗಾಗಿ 106 ಐಪಿಎಲ್ ಪಂದ್ಯಗಳಲ್ಲಿ ಅವರು ತಮ್ಮ ಹೆಸರಿಗೆ 197 ಸಿಕ್ಸರ್‌ಗಳನ್ನು ಸೇರಿಸಿದ್ದಾರೆ. ಸಿಕ್ಸರ್‌ಗಳ ದಾಖಲೆಯ ಜೊತೆಗೆ, ಕೆಕೆಆರ್‌ಗಾಗಿ ಐಪಿಎಲ್‌ನಲ್ಲಿ 100 ವಿಕೆಟ್‌ಗಳನ್ನು ಪೂರೈಸುವ ಅವಕಾಶವೂ ರಸೆಲ್‌ಗೆ ಇರುತ್ತದೆ.
