Asia Cup 2022: ಏಷ್ಯಾಕಪ್​ಗೆ ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ..!

Edited By:

Updated on: Aug 24, 2022 | 8:28 PM

Asia Cup 2022: ದ್ರಾವಿಡ್ ಏಷ್ಯಾಕಪ್​ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಅವರ ಕೊರೊನಾ ವರದಿಯು ನೆಗೆಟಿವ್ ಬಂದರೆ ಅವರು ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

1 / 5
ಆಗಸ್ಟ್ 27 ರಿಂದ ಆರಂಭವಾಗುತ್ತಿರುವ ಏಷ್ಯಾಕಪ್​ಗಾಗಿ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್​ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿದೆ.

ಆಗಸ್ಟ್ 27 ರಿಂದ ಆರಂಭವಾಗುತ್ತಿರುವ ಏಷ್ಯಾಕಪ್​ಗಾಗಿ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್​ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿದೆ.

2 / 5

ಲಕ್ಷ್ಮಣ್ ಅವರನ್ನು ಭಾರತ ತಂಡದ ಹಂಗಾಮಿ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ, ಯುಎಇಗೆ ಹೊರಡುವ ಮೊದಲು, ಟೀಂ ಇಂಡಿಯಾ ಹಾಲಿ ಕೋಚ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಬಿಸಿಸಿಐ ಕೂಡ ದ್ರಾವಿಡ್ ತಂಡದೊಂದಿಗೆ ಯುಎಇಗೆ ಹೋಗುತ್ತಿಲ್ಲ ಎಂದು ಹೇಳಿತ್ತು.

3 / 5

ದ್ರಾವಿಡ್ ಅನುಪಸ್ಥಿತಿಯಲ್ಲಿ, ಲಕ್ಷ್ಮಣ್ ಸಹ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಭಾರತ ODI ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತು.

4 / 5

ಆದರೆ, ದ್ರಾವಿಡ್ ಏಷ್ಯಾಕಪ್​ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಅವರ ಕೊರೊನಾ ವರದಿಯು ನೆಗೆಟಿವ್ ಬಂದರೆ ಅವರು ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

5 / 5

ಹೀಗಾಗಿ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ, ಅವೇಶ್ ಖಾನ್ ಅವರೊಂದಿಗೆ ಲಕ್ಷ್ಮಣ್ ಹರಾರೆಯಿಂದ ದುಬೈಗೆ ಹಾರಿದ್ದಾರೆ.

Published On - 7:44 pm, Wed, 24 August 22

Loading...
Unable to load recommendations.
Follow Us