ಪ್ರಸಿದ್ಧ ಮೌಕಾ ಮೌಕಾ ಜಾಹೀರಾತಿನಲ್ಲಿ ನಟಿಸುವ ಈ ಪಾಕ್ ಅಭಿಮಾನಿ ಪರಿಚಯ ನಿಮಗಿದೆಯೇ?

Mauka Mauka: ವಿಶಾಲ್ ಮಲ್ಹೋತ್ರಾ ದೆಹಲಿಯ ನಿವಾಸಿ. ಈ ಜಾಹೀರಾತಿನಲ್ಲಿ ಮೊದಲು ಕಾಣಿಸಿಕೊಂಡಾಗ ಅವರಿಗೆ 25 ವರ್ಷ ಮತ್ತು ಈಗ 32 ವರ್ಷ.

1/6
ಯಾವಾಗ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತದೆಯೋ, ಆಗ ಎಲ್ಲೆಡೆ ಚರ್ಚೆಯಾಗುತ್ತದೆ. ಮೈದಾನದ ಹೊರಗಿನಿಂದ ಮೈದಾನದ ಒಳಗಿನವರೆಗೂ ವಾತಾವರಣವು ಬಿಸಿಯಾಗಿರುತ್ತದೆ. ಈ ಸ್ಪರ್ಧೆಯ ಉಪಸ್ಥಿತಿಯು ಟಿವಿ ಜಾಹೀರಾತುಗಳಲ್ಲಿಯೂ ಕಂಡುಬರುತ್ತದೆ, ಇದರಲ್ಲಿ ಅತ್ಯಂತ ಪ್ರಸಿದ್ಧವಾದ ಜಾಹೀರಾತುಗಳಲ್ಲಿ ಒಂದು 'ಮೌಕಾ-ಮೌಕಾ'. 2015 ರಲ್ಲಿ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಈ ಜಾಹೀರಾತನ್ನು ಟಿವಿಯಲ್ಲಿ ಪ್ರಸಾರಮಾಡಲಾಯಿತು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾದಾಗ ಈ ಜಾಹೀರಾತು ಬರುತ್ತದೆ. ಮೌಕಾ-ಮೌಕಾ ಎಂಬ ಟ್ಯಾಗ್‌ಲೈನ್‌ ಹೊಂದಿದೆ. ಈ ಜಾಹೀರಾತಿನಲ್ಲಿ ಪಾಕಿಸ್ತಾನಿ ಅಭಿಮಾನಿ-ನಟನಾಗಿದ್ದಾರೆ. ಆತ ನಿಜವಾಗಿ ಭಾರತೀಯನಾಗಿದ್ದು ಆತನ ಹೆಸರು ವಿಶಾಲ್ ಮಲ್ಹೋತ್ರ. ನಾವು ಈಗ ಅವರ ಬಗ್ಗೆ ಹೆಚ್ಚು ವಿವರವಾಗಿ ಹೇಳಲಿದ್ದೇವೆ.

2/6
ವಿಶಾಲ್ ಮಲ್ಹೋತ್ರಾ ದೆಹಲಿಯ ನಿವಾಸಿ. ಈ ಜಾಹೀರಾತಿನಲ್ಲಿ ಮೊದಲು ಕಾಣಿಸಿಕೊಂಡಾಗ ಅವರಿಗೆ 25 ವರ್ಷ ಮತ್ತು ಈಗ 32 ವರ್ಷ. ನಟನೆಯಲ್ಲಿ ತನ್ನ ಅದೃಷ್ಟ ಪ್ರಯತ್ನಿಸುವ ಮೊದಲು, ಮಲ್ಹೋತ್ರಾ ಅಕ್ಸೆಂಚರ್‌ ಕಂಪನಿಯಲ್ಲಿ ಕೆಲಸ ಮಾಡಿದರು. ಅವರು ಈ ಕಂಪನಿಯಲ್ಲಿ ಒಂದು ವರ್ಷ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.

3/6
ಕೆಲಸ ಬಿಟ್ಟ ನಂತರ ನಟನೆಗೆ ಬಂದ ಮಲ್ಹೋತ್ರಾ, ಶಾರುಖ್ ಖಾನ್ ಜೊತೆ ಲಕ್ಸ್ ಸೋಪ್ ಜಾಹೀರಾತಿನಲ್ಲಿ ಕೆಲಸ ಮಾಡಿದರು. ಇದರ ಹೊರತಾಗಿ, ಅವರು ಸೋನಿ, ಕೆಎಫ್‌ಸಿ ಮತ್ತು ಪ್ರಿಯಾ ಗೋಲ್ಡ್ ಬಿಸ್ಕಟ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

4/6
ಜಾಹೀರಾತು ಚಿತ್ರದಲ್ಲಿ ಕೆಲಸ ಮಾಡುವುದರ ಜೊತೆಗೆ, ಮಲ್ಹೋತ್ರಾ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ರಾಗಿಣಿ ಎಂಎಂಎಸ್ 2 ಮತ್ತು 1920 ಲಂಡನ್‌ನಂತಹ ಚಿತ್ರಗಳಲ್ಲಿ ತಮ್ಮ ಅಭಿನಯವನ್ನು ತೋರಿಸಿದ್ದಾರೆ.

5/6
ಅವರು ಆಕಸ್ಮಿಕವಾಗಿ ಜಾಹಿರಾತಿಗೆ ಬಂದ ನಂತರ ಪ್ರಸಿದ್ಧರಾದರು. ಅವರು ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡ ನಂತರ ಎರಡನೆಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಏಕೆಂದರೆ ಈ ಜಾಹೀರಾತಿನೊಂದಿಗಿನ ಒಪ್ಪಂದ ಕೇವಲ ಒಂದು ಜಾಹೀರಾತಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಕಂಪನಿಯು ಮೂರನೇ ಆವೃತ್ತಿಯಲ್ಲಿ ಜನಪ್ರಿಯತೆಯನ್ನು ನೋಡಿ ಅವರನ್ನು ಮರಳಿ ಈ ಜಾಹೀರಾತಿಗೆ ಕರೆತಂತು.

6/6
ಅವರು ಮುಂಬೈನಲ್ಲಿ ಈ ಜಾಹೀರಾತಿನ ಚಿತ್ರೀಕರಣದಲ್ಲಿದ್ದಾಗ, ಒಬ್ಬ ಪೋಲಿಸ್ ಅವರನ್ನು ಕರಾಚಿಯ ನಿವಾಸಿ ಎಂದು ತಪ್ಪಾಗಿ ಭಾವಿಸಿದ್ದರೆಂಬ ವಿಷಯವನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಲ್ಹೋತ್ರಾ 'ಯೆ ಪ್ಯಾರ್ ನಹಿ ತೊ ಕ್ಯಾ ಹೈ' ಎಂಬ ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರೆ.

Click on your DTH Provider to Add TV9 Kannada