- Kannada News Photo gallery Cricket photos Who is Sapna Gill fight with Indian cricketer Prithvi Shaw see full details in kannada
ಪೃಥ್ವಿ ಶಾ ಮೇಲೆ ದಾಳಿಗೆ ಯತ್ನಿಸಿದ ಆರೋಪ ಹೊತ್ತಿರುವ ಸಪ್ನಾ ಗಿಲ್ ಯಾರು ಗೊತ್ತಾ?
prithvi shaw :ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ಸಪ್ನಾ ಗಿಲ್ ಅವರನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಪೃಥ್ವಿ ಶಾ ಮೇಲೆ ಇಷ್ಟು ಧೈರ್ಯವಾಗಿ ದಾಳಿ ನಡೆಸಿರುವ ಈ ಸಪ್ನಾ ಗಿಲ್ ಯಾರು ಎಂಬ ಪ್ರಶ್ನೆ ಮೂಡಿರಬೇಕು. ಅದಕ್ಕೆಲ್ಲ ಉತ್ತರ ಇಲ್ಲಿದೆ.
Updated on: Feb 17, 2023 | 12:11 PM

ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ಸಪ್ನಾ ಗಿಲ್ ಅವರನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಪೃಥ್ವಿ ಶಾ ಮೇಲೆ ಇಷ್ಟು ಧೈರ್ಯವಾಗಿ ದಾಳಿ ನಡೆಸಿರುವ ಈ ಸಪ್ನಾ ಗಿಲ್ ಯಾರು ಎಂಬ ಪ್ರಶ್ನೆ ಮೂಡಿರಬೇಕು. ಅದಕ್ಕೆಲ್ಲ ಉತ್ತರ ಇಲ್ಲಿದೆ.

ವಾಸ್ತವವಾಗಿ ಸಪ್ನಾ ಗಿಲ್ ಒರ್ವ ಮಾಡೆಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸಪ್ನಾ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷ 18 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಸಪ್ನಾ ಮಾಡೆಲ್ ಮಾತ್ರವಲ್ಲದೆ ನಟಿಯೂ ಆಗಿದ್ದು, ಆಗಾಗ್ಗೆ ತಮ್ಮ ಫೋಟೋಗಳು ಮತ್ತು ರೀಲ್‌ಗಳ ಮೂಲಕ ಸಪ್ನಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.

ಸಪ್ನಾ ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿದ್ದು, 2017 ರಲ್ಲಿ ಕಾಶಿ ಅಮರನಾಥ್ ಮತ್ತು 2021 ರಲ್ಲಿ ಐ ಮೇರಾ ವತನ್ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

ಕಾಶಿ ಅಮರನಾಥ್ ಚಿತ್ರದಲ್ಲಿ, ಸಪ್ನಾ ಭೋಜ್‌ಪುರಿ ನಟರಾದ ರವಿ ಕಿಶನ್, ದಿನೇಶ್ ಲಾಲ್ ಯಾದವ್ ಮತ್ತು ನಟಿ ಆಮ್ರಪಾಲಿ ದುಬೆ ಅವರೊಂದಿಗೆ ಕೆಲಸ ಮಾಡಿದ್ದಾರೆ.




