- Kannada News Photo gallery Cricket photos Women’s T20 World Cup 2024 all 10 teams semifinals qualification scenarios
ಟಿ20 ವಿಶ್ವಕಪ್‌ನಿಂದ 3 ತಂಡಗಳು ಔಟ್! 7 ತಂಡಗಳ ನಡುವೆ ಸೆಮೀಸ್ ಟಿಕೆಟ್ಗಾಗಿ ಫೈಟ್
Women’s T20 World Cup 2024: ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಎರಡೂ ಗುಂಪಿನಲ್ಲಿ ಯಾವ್ಯಾವ ತಂಡಗಳು ಸೆಮಿಫೈನಲ್‌ಗೆ ಹೋಗಲಿವೆ? ಯಾವ ತಂಡಗಳಿಗೆ ಈಗಾಗಲೇ ಟೂರ್ನಿಯಿಂದ ಗೇಟ್ಪಾಸ್ ಸಿಕ್ಕಿದೆ? ಇದರ ಜೊತೆಗೆ ಯಾವ ತಂಡಗಳು ಇತರ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್‌ಗೆ ಹೋಗಲು ಕಾಯುತ್ತಿವೆ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ.
Updated on:Oct 13, 2024 | 3:21 PM

ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಎರಡೂ ಗುಂಪಿನಲ್ಲಿ ಯಾವ್ಯಾವ ತಂಡಗಳು ಸೆಮಿಫೈನಲ್‌ಗೆ ಹೋಗಲಿವೆ? ಯಾವ ತಂಡಗಳಿಗೆ ಈಗಾಗಲೇ ಟೂರ್ನಿಯಿಂದ ಗೇಟ್ಪಾಸ್ ಸಿಕ್ಕಿದೆ? ಇದರ ಜೊತೆಗೆ ಯಾವ ತಂಡಗಳು ಇತರ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್‌ಗೆ ಹೋಗಲು ಕಾಯುತ್ತಿವೆ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ.

ಇನ್ನು ನಿನ್ನೆ ಅಂದರೆ ಅಕ್ಟೋಬರ್ 12 ರಂದು ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು ಎದುರಿಸಿತ್ತು. ಇದರಲ್ಲಿ ಕಿವೀ ತಂಡವು ಗೆದ್ದು ಶ್ರೀಲಂಕಾವನ್ನು ಸೆಮಿಫೈನಲ್‌ನ ರೇಸ್‌ನಿಂದ ಹೊರಹಾಕಿತು.

ಇತ್ತ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವ ಮೂಲಕ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ಸುಮಾರು 3 ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿರುವುದು ಸ್ಪಷ್ಟವಾಗಿದೆ.

ಗ್ರೂಪ್-ಎ ಕುರಿತು ಮಾತನಾಡುವುದಾದರೆ, ಶ್ರೀಲಂಕಾ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇದರಿಂದಾಗಿ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎ ಗುಂಪಿನಲ್ಲಿರುವ ಶ್ರೀಲಂಕಾ ತಂಡ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.

ಇನ್ನು ಗ್ರೂಪ್-ಬಿ ಬಗ್ಗೆ ಮಾತನಾಡಿದರೆ, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ಎರಡೂ ತಂಡಗಳು ರೇಸ್‌ನಿಂದ ಹೊರಬಿದ್ದಿವೆ. ಸ್ಕಾಟ್ಲೆಂಡ್ 3 ಪಂದ್ಯಗಳನ್ನು ಆಡಿದ್ದು, ಮೂರೂ ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಬಾಂಗ್ಲಾದೇಶವು ನಾಲ್ಕು ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಿ ಸೋತು ಒಂದರಲ್ಲಿ ಗೆದ್ದಿದೆ. ಬಿ ಗುಂಪಿನ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ನಾಲ್ಕನೇ ಹಾಗೂ ಸ್ಕಾಟ್ಲೆಂಡ್ ಐದನೇ ಸ್ಥಾನದಲ್ಲಿ ಮುಂದುವರಿದಿದೆ.

ಗ್ರೂಪ್-ಎಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದು, ಕಾಂಗರೂ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಇದಲ್ಲದೇ ಇದೀಗ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಮಿಫೈನಲ್ ಪ್ರವೇಶಿಸಲು ಕದನ ನಡೆಯುತ್ತಿದೆ. ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಫೈನಲ್ ತಲುಪಿದ್ದರೆ, ಅದೇ ಗುಂಪಿನಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಸೆಮೀಸ್ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ.
Published On - 3:18 pm, Sun, 13 October 24



















