ಟಿ20 ವಿಶ್ವಕಪ್‌ನಿಂದ 3 ತಂಡಗಳು ಔಟ್! 7 ತಂಡಗಳ ನಡುವೆ ಸೆಮೀಸ್ ಟಿಕೆಟ್​ಗಾಗಿ ಫೈಟ್

Updated on: Oct 13, 2024 | 3:21 PM

Women’s T20 World Cup 2024: ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಲೀಗ್​ ಹಂತ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಎರಡೂ ಗುಂಪಿನಲ್ಲಿ ಯಾವ್ಯಾವ ತಂಡಗಳು ಸೆಮಿಫೈನಲ್‌ಗೆ ಹೋಗಲಿವೆ? ಯಾವ ತಂಡಗಳಿಗೆ ಈಗಾಗಲೇ ಟೂರ್ನಿಯಿಂದ ಗೇಟ್​ಪಾಸ್ ಸಿಕ್ಕಿದೆ? ಇದರ ಜೊತೆಗೆ ಯಾವ ತಂಡಗಳು ಇತರ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್​ಗೆ ಹೋಗಲು ಕಾಯುತ್ತಿವೆ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ.

1 / 7
ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಲೀಗ್​ ಹಂತ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಎರಡೂ ಗುಂಪಿನಲ್ಲಿ ಯಾವ್ಯಾವ ತಂಡಗಳು ಸೆಮಿಫೈನಲ್‌ಗೆ ಹೋಗಲಿವೆ? ಯಾವ ತಂಡಗಳಿಗೆ ಈಗಾಗಲೇ ಟೂರ್ನಿಯಿಂದ ಗೇಟ್​ಪಾಸ್ ಸಿಕ್ಕಿದೆ? ಇದರ ಜೊತೆಗೆ ಯಾವ ತಂಡಗಳು ಇತರ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್​ಗೆ ಹೋಗಲು ಕಾಯುತ್ತಿವೆ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ.

ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಲೀಗ್​ ಹಂತ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಎರಡೂ ಗುಂಪಿನಲ್ಲಿ ಯಾವ್ಯಾವ ತಂಡಗಳು ಸೆಮಿಫೈನಲ್‌ಗೆ ಹೋಗಲಿವೆ? ಯಾವ ತಂಡಗಳಿಗೆ ಈಗಾಗಲೇ ಟೂರ್ನಿಯಿಂದ ಗೇಟ್​ಪಾಸ್ ಸಿಕ್ಕಿದೆ? ಇದರ ಜೊತೆಗೆ ಯಾವ ತಂಡಗಳು ಇತರ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್​ಗೆ ಹೋಗಲು ಕಾಯುತ್ತಿವೆ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ.

2 / 7

ಇನ್ನು ನಿನ್ನೆ ಅಂದರೆ ಅಕ್ಟೋಬರ್ 12 ರಂದು ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು ಎದುರಿಸಿತ್ತು. ಇದರಲ್ಲಿ ಕಿವೀ ತಂಡವು ಗೆದ್ದು ಶ್ರೀಲಂಕಾವನ್ನು ಸೆಮಿಫೈನಲ್‌ನ ರೇಸ್‌ನಿಂದ ಹೊರಹಾಕಿತು.

3 / 7

ಇತ್ತ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವ ಮೂಲಕ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ಸುಮಾರು 3 ತಂಡಗಳು ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿರುವುದು ಸ್ಪಷ್ಟವಾಗಿದೆ.

4 / 7

ಗ್ರೂಪ್-ಎ ಕುರಿತು ಮಾತನಾಡುವುದಾದರೆ, ಶ್ರೀಲಂಕಾ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇದರಿಂದಾಗಿ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎ ಗುಂಪಿನಲ್ಲಿರುವ ಶ್ರೀಲಂಕಾ ತಂಡ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.

5 / 7

ಇನ್ನು ಗ್ರೂಪ್-ಬಿ ಬಗ್ಗೆ ಮಾತನಾಡಿದರೆ, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ಎರಡೂ ತಂಡಗಳು ರೇಸ್​ನಿಂದ ಹೊರಬಿದ್ದಿವೆ. ಸ್ಕಾಟ್ಲೆಂಡ್ 3 ಪಂದ್ಯಗಳನ್ನು ಆಡಿದ್ದು, ಮೂರೂ ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಬಾಂಗ್ಲಾದೇಶವು ನಾಲ್ಕು ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಿ ಸೋತು ಒಂದರಲ್ಲಿ ಗೆದ್ದಿದೆ. ಬಿ ಗುಂಪಿನ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ನಾಲ್ಕನೇ ಹಾಗೂ ಸ್ಕಾಟ್ಲೆಂಡ್ ಐದನೇ ಸ್ಥಾನದಲ್ಲಿ ಮುಂದುವರಿದಿದೆ.

6 / 7

ಗ್ರೂಪ್-ಎಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದು, ಕಾಂಗರೂ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

7 / 7

ಇದಲ್ಲದೇ ಇದೀಗ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಮಿಫೈನಲ್ ಪ್ರವೇಶಿಸಲು ಕದನ ನಡೆಯುತ್ತಿದೆ. ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಫೈನಲ್ ತಲುಪಿದ್ದರೆ, ಅದೇ ಗುಂಪಿನಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಸೆಮೀಸ್​ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ.

Published On - 3:18 pm, Sun, 13 October 24

Loading...
Unable to load recommendations.
Follow Us