- Kannada News Photo gallery Cricket photos World Cup 2023 ICC to Unveil World Cup 2023 Schedule on June 27
World Cup 2023: ‘100’; ಈ ದಿನದಂದು ಪ್ರಕಟವಾಗಲಿದೆ ಏಕದಿನ ವಿಶ್ವಕಪ್ ವೇಳಾಪಟ್ಟಿ
World Cup 2023: ವಾಸ್ತವವಾಗಿ ಬಿಸಿಸಿಐ ವಿಶ್ವಕಪ್ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿ ಈಗಾಗಲೇ ವಾರ ಕಳೆದಿದೆ. ಆದರೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ವೇಳಾಪಟ್ಟಿ ಸಂಬಂಧಿತ ಹಗ್ಗಜಗ್ಗಾಟದಿಂದಾಗಿ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ.
Updated on:Jun 22, 2023 | 11:15 AM

ದಿನಕಳೆದಂತೆ ಏಕದಿನ ವಿಶ್ವಕಪ್ ವೇಳಾಪಟ್ಟಿಯ ಬಿಡುಗಡೆಗಾಗಿ ಕಾಯುವಿಕೆ ಹೆಚ್ಚಾಗುತ್ತದೆ. ಇತ್ತೀಚಿನ ಬೆಳವಣಿಗೆಗಳು ಮತ್ತು ವರದಿಗಳ ಪ್ರಕಾರ, 2023ರ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಜೂನ್ 27 ರಂದು ಬಿಡುಗಡೆ ಮಾಡಲು ಐಸಿಸಿ ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ, ಒಂದು ವೇಳೆ ಜೂನ್ 27 ರಂದು ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದರೆ, ವೇಳಾಪಟ್ಟಿ ಬಿಡುಗಡೆಯಾದ ದಿನದಿಂದ ವಿಶ್ವಕಪ್ ಆರಂಭಕ್ಕೆ (ಅಕ್ಟೋಬರ್ 5) ಇನ್ನು 100 ದಿನಗಳ ಬಾಕಿ ಉಳಿಯಲಿವೆ.

ವಾಸ್ತವವಾಗಿ ಬಿಸಿಸಿಐ ವಿಶ್ವಕಪ್ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿ ಈಗಾಗಲೇ ವಾರ ಕಳೆದಿದೆ. ಆದರೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ವೇಳಾಪಟ್ಟಿ ಸಂಬಂಧಿತ ಹಗ್ಗಜಗ್ಗಾಟದಿಂದಾಗಿ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ.

ಪ್ರಮುಖವಾಗಿ ವಿಶ್ವಕಪ್ ವೇಳಾಪಟ್ಟಿಯಲ್ಲಿ ಎರಡು ಬದಲಾವಣೆಗಳನ್ನು ಕೇಳಿರುವ ಪಿಸಿಬಿ, ವೇಳಾಪಟ್ಟಿ ಬದಲಾವಣೆವರೆಗೂ ನಾವು ಈ ವಿಶ್ವಕಪ್ ವೇಳಾಪಟ್ಟಿಗೆ ಅನುಮೋದನೆ ಅಥವಾ ಸಮ್ಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ ಎಂದು ಬಿಸಿಬಿಯ ಮಾಜಿ ಹಂಗಾಮಿ ಅಧ್ಯಕ್ಷ ಜಮ್ ಸೇಥಿ ಹೇಳಿದ್ದರು.

ಅಲ್ಲದೆ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದು ನಮ್ಮ ಸರ್ಕಾರದ ತೀರ್ಮಾನದ ಮೇಲೆ ನಿಂತಿದೆ. ಹೀಗಾಗಿ ತಮ್ಮ ಸರ್ಕಾರವು ಪಂದ್ಯದ ಸ್ಥಳಗಳಿಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಮಾತ್ರ ಅವರು ತಮ್ಮ ಅನುಮೋದನೆಯನ್ನು ಕಳುಹಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಅಲ್ಲದೆ ಎರಡು ಪಂದ್ಯಗಳ ಸ್ಥಳ ಬದಲಾವಣೆ ಕೇಳಿರುವ ಪಿಸಿಬಿ, ಅಪ್ಘಾನ್ ವಿರುದ್ಧದ ಪಂದ್ಯವನ್ನು ಚೆನ್ನೈನಿಂದ ಬೆಂಗಳೂರಿಗೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಬದಲಿಸಲು ಮನವಿ ಮಾಡಿದೆ. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಪಿಸಿಬಿ ಮನವಿಯನ್ನು ಬಿಸಿಸಿಐ ಹಾಗೂ ಐಸಿಸಿ ನಿರಾಕರಿಸಿದೆ ಎಂದು ವರದಿಯಾಗಿದೆ. ಸದ್ಯ ಈ ವಿಳಂಬಗಳೇ ಐಸಿಸಿ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಗೆ ತಡೆ ಹಿಡಿದಿವೆ. ಈಗ, ಪಿಸಿಬಿಯಿಂದ ಕ್ಲಿಯರೆನ್ಸ್ ಕಳುಹಿಸಿದ ತಕ್ಷಣ, ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
Published On - 11:14 am, Thu, 22 June 23



















