- Kannada News Photo gallery Cricket photos WPL 2023 Final Delhi Capitals and Mumbai Indians Practice for Women's Premier League Final Kannada News
DCW vs MIW Final: ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಡೆಲ್ಲಿ-ಮುಂಬೈ ಭರ್ಜರಿ ಅಭ್ಯಾಸ: ಫೋಟೋ
WPL 2023 Final: ಇಂದು ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹಾಗೂ ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
Updated on: Mar 26, 2023 | 8:38 AM

ಭಾರೀ ಕುತೂಹಲ ಕೆರಳಿಸಿದ್ದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಫೈನಲ್ ಪಂದ್ಯ ನಡೆಯಲಿದ್ದು, ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹಾಗೂ ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳು ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿದ್ದು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.

ಡೆಲ್ಲಿ ತಂಡದ ಪ್ರಮುಖ ಬಲ ಬ್ಯಾಟರ್ಗಳೆಂದೇ ಹೇಳಬಹುದು. ಮುಖ್ಯವಾಗಿ ಓಪನರ್ಗಳಾದ ನಾಯಕಿ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದು ಅಪಾಯಕಾರಿ ಆಗಿದ್ದಾರೆ.

ಜಿಮಿಮಾ ರೋಡ್ರಿಗಸ್, ಯಸ್ತಿಕಾ ಭಾಟಿಯಾ, ಮರಿಝನ್ನೆ ಕಪ್, ಅಲೈಸ್ ಕ್ಯಾಪ್ಸೆ ಕೂಡ ಡೆಲ್ಲಿ ತಂಡದ ಬ್ಯಾಟಿಂಗ್ ಅಸ್ತ್ರ.

ಬೌಲಿಂಗ್ನಲ್ಲಿ ಟಾರಾ ನೋರಿಸ್ ಅಪಾಯಕಾರಿ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಇವರು ಆರ್ಸಿಬಿ ವಿರುದ್ಧ 5 ವಿಕೆಟ್ ಕಿತ್ತು ಮಿಂಚಿದ್ದರು. ಶಿಖಾ ಪಾಂಡೆ, ಜೆಸ್ ಜೋನ್ಸನ್, ಅಲಿಸ್ ಕ್ಯಾಪ್ಸಿ ಪ್ರಮುಖ ಬೌಲರ್ ಆಗಿದ್ದಾರೆ.

ಇತ್ತ ಮುಂಬೈ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಎಲಿಮಿನೇಟರ್ ಪಂದ್ಯದಲ್ಲಿ ನ್ಯಾಟ್ ಸೀವರ್ ಬ್ರಂಟ್ ನೀಡಿದ ಪ್ರದರ್ಶನ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಒಟ್ಟು 9 ಪಂದ್ಯಗಳಲ್ಲಿ ಇವರು 272 ರನ್ ಗಳಿಸಿದ್ದಾರೆ. 149.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಹಾಗೆಯೆ ಹೇಲಿ ಮ್ಯಾಥ್ಯೂಸ್ ಕೂಡ 9 ಪಂದ್ಯಗಳಲ್ಲಿ 127.09 ಸ್ಟ್ರೈಕ್ ರೇಟ್‌ನಲ್ಲಿ 258 ರನ್ ಗಳಿಸಿದ್ದಾರೆ. ಜೊತೆಗೆ 13 ವಿಕೆಟ್ ಪಡೆದಿದ್ದಾರೆ. ಹರ್ಮನ್ಪ್ರೀತ್ ಯಾವುದೇ ಸಂದರ್ಭದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇಸ್ಸಿ ವಾಂಗ್ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು. ಸೈಕಾ ಇಶಾಕ್ ಕೂಡ ಡೇಂಜರಸ್ ಬೌಲರ್ ಆಗಿದ್ದಾರೆ.




