- Kannada News Photo gallery Cricket photos WPL 2023: Mumbai Indians Creates Biggest Margin Win Women T20 Leagues
Mumbai Indians: ಟಿ20 ಲೀಗ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್
WPL 2023: 208 ರನ್ಗಳ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು ಕೇವಲ 64 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 143 ರನ್ಗಳಿಂದ ಜಯಭೇರಿ ಬಾರಿಸಿತು.
Updated on: Mar 05, 2023 | 9:58 PM

ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ 143 ರನ್ಗಳ ಭರ್ಜರಿ ಜಯ ಸಾಧಿಸಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಐತಿಹಾಸಿಕ ದಾಖಲೆ ಬರೆದಿದೆ. ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತ್ತು.

208 ರನ್ಗಳ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು ಕೇವಲ 64 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 143 ರನ್ಗಳಿಂದ ಜಯಭೇರಿ ಬಾರಿಸಿತ್ತು. ಇದರೊಂದಿಗೆ ಮಹಿಳಾ ಟಿ20 ಲೀಗ್ನಲ್ಲಿ ಬೃಹತ್ ರನ್ಗಳ ಅಂತರದಿಂದ ಗೆದ್ದ ತಂಡ ಎಂಬ ವಿಶ್ವ ದಾಖಲೆ ಮುಂಬೈ ಇಂಡಿಯನ್ಸ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್ನ ಪರ್ತ್ ಸ್ಕಾಚರ್ಸ್ ತಂಡದ ಹೆಸರಿನಲ್ಲಿತ್ತು. ಪರ್ತ್ ತಂಡವು ಮೆಲ್ಬೋರ್ನ್ ರೆನೆಗೆಡ್ಸ್ ವಿರುದ್ಧ ಬರೋಬ್ಬರಿ 104 ರನ್ಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು.

ಹಾಗೆಯೇ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಹೋಬಾರ್ಟ್ ಹುರಿಕೇನ್ಸ್ ವಿರುದ್ಧ 103 ರನ್ಗಳಿಂದ ಜಯ ಸಾಧಿಸಿತ್ತು. ಇದೀಗ ಈ ಎಲ್ಲಾ ದಾಖಲೆಗಳನ್ನು ಮುರಿದು ಮುಂಬೈ ಇಂಡಿಯನ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 143 ರನ್ಗಳ ಅಂತರದಿಂದ ಗೆದ್ದು, ಮಹಿಳಾ ಟಿ20 ಲೀಗ್ನಲ್ಲಿ ಅತ್ಯಧಿಕ ಮೊತ್ತಗಳ ಅಂತರದಲ್ಲಿ ಜಯ ಸಾಧಿಸಿದ ತಂಡ ಎಂಬ ದಾಖಲೆಯನ್ನು ಮುಂಬೈ ಇಂಡಿಯನ್ಸ್ ನಿರ್ಮಿಸಿರುವುದು ವಿಶೇಷ.




